ನೆರೆ ಸಂತ್ರಸ್ತರ ಪುನರ್ವಸತಿಗಾಗಿ 10 ಕೋಟಿ ರೂಪಾಯಿ ಘೋಷಿಸಿದ ಜಮಾಅತೆ ಇಸ್ಲಾಮಿ ಹಿಂದ್

0
2797

ಸನ್ಮಾರ್ಗ ವಾರ್ತೆ

ಕೋಝಿಕೋಡ್, (ಕೇರಳ):ಆ.19- ರಾಜ್ಯದ ವಿವಿಧ ಭಾಗಗಳಲ್ಲಿ ಪ್ರವಾಹ ಮತ್ತು ಭೂಕುಸಿತದ ನಂತರ ಭಾರಿ ನಷ್ಟ ಅನುಭವಿಸಿದ ಜನರಿಗೆ ಸಹಾಯ ಮಾಡುವ ಯೋಜನೆಗಳೊಂದಿಗೆ ಜಮಾಅತೆ ಇಸ್ಲಾಮಿ ಹಿಂದ್ ಮುಂದೆ ಬಂದಿದೆ. ಮನೆಗಳ ನಿರ್ಮಾಣ ಮತ್ತು ಇತರ ಪರಿಹಾರ ಯೋಜನೆಗಳಿಗಾಗಿ ಜಮಾಅತೆ ಇಸ್ಲಾಮೀ 10 ಕೋಟಿ ರೂ. ಪರಿಹಾರವನ್ನು ಘೋಷಿಸಿದೆ.

ಮಲಬಾರ್‌ನ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನಂತರ, ಜಮಾಅತೆ ಇಸ್ಲಾಮಿ ಕೇರಳದ ರಾಜ್ಯಾಧ್ಯಕ್ಷ ಎಂಐ ಅಬ್ದುಲ್ ಅಜೀಜ್ ಅವರು ವಿವಿಧ ಪುನರ್ನಿರ್ಮಾಣ ಕಾರ್ಯಗಳಿಗಾಗಿ 10 ಕೋಟಿ ರೂ. ಪರಿಹಾರವನ್ನು ಸಂಘಟನೆಯ ವತಿಯಿಂದ ಘೋಷಿಸಿದರು.

“ಹೊಸ ಮನೆಗಳ ನಿರ್ಮಾಣಕ್ಕಾಗಿ ಮೆಪ್ಪಾಡಿಯಲ್ಲಿ ಒಬ್ಬ ವ್ಯಕ್ತಿಯು ನಮಗೆ 35 ಸೆಂಟ್ಸ್ ಭೂಮಿಯನ್ನು ಉಚಿತವಾಗಿ ನೀಡಿದ್ದಾರೆ.

ಸಂತ್ರಸ್ತರಿಗಾಗಿ ಈ ಸ್ಥಳದಲ್ಲೇ ಸುಮಾರು ಏಳು ಮನೆಗಳನ್ನು ನಿರ್ಮಿಸಬಹುದು ಎಂದು ನಾವು ಭಾವಿಸುತ್ತೇವೆ ”ಎಂದು ಕೇರಳದ ಜಮಾಅತೆ ಇಸ್ಲಾಮಿಯ ಕಾರ್ಯದರ್ಶಿ ಶೇಖ್ ಮುಹಮ್ಮದ್ ಕಾರಕ್ಕುನ್ನು ಹೇಳಿದರು. “ಐಡಿಯಲ್ ರಿಲೀಫ್ ವಿಂಗ್‌ನ ಸ್ವಯಂ ಸೇವಕರು ಪುತ್ತುಮಾಲಾ ಮತ್ತು ಕಾವಲಪ್ಪಾರದಲ್ಲಿ ಪರಿಹಾರ ಕಾರ್ಯಗಳಲ್ಲಿ ನಿರತರಾಗಿದ್ದಾರೆ. ಅಲ್ಲಿ ಭೂಕುಸಿತಗಳು ತೀವ್ರತೆಯಿಂದ ಬಂದವು. ಧರ್ಮ ಅಥವಾ ಜಾತಿಯ ಹೊರತಾಗಿಯೂ ಸಂತ್ರಸ್ತರಿಗೆ ಸಹಾಯ ಮಾಡುವುದು ನಮ್ಮ ಧಾರ್ಮಿಕ ಕರ್ತವ್ಯವೆಂದು ನಾವು ಪರಿಗಣಿಸುತ್ತೇವೆ, ”ಎಂದು ಅವರು ಹೇಳಿದರು.

ಜಮಾಅತ್ ಸಹಾಯಕ ರಾಜ್ಯ ಅಧ್ಯಕ್ಷರಾದ ಪಿ ಮುಜೀಬ್ ರೆಹಮಾನ್ ಅವರು ಮಾತಾಡಿ, ಕಳೆದ ವರ್ಷ ಪ್ರವಾಹ ಪೀಡಿತರಿಗಾಗಿ 25 ಕೋಟಿ ರೂ. ಯೋಜನೆಯನ್ನು ಜಮಾಅತ್ ಹಾಕಿತ್ತು. ಈ ಯೋಜನೆ ಶೀಘ್ರದಲ್ಲೇ ಮುಗಿಯಲಿದ್ದು ಅದರ ವರದಿಯನ್ನು ಸೆಪ್ಟೆಂಬರ್ 31 ರಂದು ಪ್ರಕಟಿಸಲಾಗುವುದು. ಈ ವರ್ಷದ ಸಂತ್ರಸ್ತರಿಗೆ ನಮ್ಮ ಆರಂಭಿಕ ಯೋಜನೆ ಮೆಪ್ಪಡಿ ಮತ್ತು ಕವಲಪ್ಪರದಲ್ಲಿ ಮನೆಗಳನ್ನು ನಿರ್ಮಾಣ ಮಾಡುವುದಾಗಿದೆ’ ಎಂದು ಅವರು ಹೇಳಿದರು.

ಅದೇವೇಳೆ, ವಿಸ್ಡಮ್ ಇಸ್ಲಾಮಿಕ್ ಸಂಘಟನೆಯು ಪ್ರವಾಹ ಪರಿಹಾರಕ್ಕಾಗಿ 10 ಕೋಟಿ ರೂ. ಘೋಷಿಸಿದ್ದು ‘ಮನೆಗಳ ನಿರ್ಮಾಣ ಮತ್ತು ದುರಸ್ತಿ, ಬಾವಿಗಳನ್ನು ಸ್ವಚ್ಛಗೊಳಿಸುವುದು ಮತ್ತು ದುರಸ್ತಿ ಮಾಡುವುದು, ಆಹಾರ ಮತ್ತು ಗೃಹೋಪಯೋಗಿ ಉಪಕರಣಗಳ ಪೂರೈಕೆಗಾಗಿ ವಿವಿಧ ಜಿಲ್ಲೆಗಳಿಂದ ಬಂದ ವರದಿಗಳ ಪ್ರಕಾರ ನಾವು ವಿವರವಾದ ಯೋಜನೆಯನ್ನು ಸಿದ್ಧಪಡಿಸುತ್ತಿದ್ದೇವೆ’ ಎಂದು ವಿಸ್ಡಮ್ ಯೂತ್ ಪ್ರಧಾನ ಕಾರ್ಯದರ್ಶಿ ಕೆ ಸಜ್ಜಾದ್ ಹೇಳಿದರು.

‘ನಮ್ಮ ನಿರ್ಧಾರವು ಸಂತ್ರಸ್ತರಿಗೆ ಸರಕಾರ ನೀಡುವ ಸಹಾಯಹಸ್ತದೊಂದಿಗೆ ಕೈ ಜೋಡಿಸುವುದಾಗಿದೆ. ಮನೆಯನ್ನು ಕಳೆದುಕೊಂಡವರಿಗೆ ಸರಕಾರ 4 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ ಆದರೆ ಕುಟುಂಬದ ಅವಶ್ಯಕತೆಗೆ ಅನುಗುಣವಾಗಿ ಮನೆ ನಿರ್ಮಾಣಕ್ಕೆ ಅಗತ್ಯವಾದ ಹೆಚ್ಚುವರಿ ಮೊತ್ತವನ್ನು ನಾವು ಭರಿಸಲು ಮುಂದಾಗುತ್ತೇವೆ, ”ಎಂದು ಸಜ್ಜಾದ್ ಹೇಳಿದರು.