ಉರ್ದುಗಾನ್‍: ಜಗತ್ತಿನ ಅತ್ಯಂತ ಪ್ರಭಾವಿ ಮುಸ್ಲಿಂ ನಾಯಕರಲ್ಲಿ ಪ್ರಥಮ ಸ್ಥಾನ

0
934

ಅಂಕಾರ: ಜಗತ್ತಿನ ಅತ್ಯಂತ ಪ್ರಭಾವಿಯಾದ 500 ಮುಸ್ಲಿಮರಲ್ಲಿ ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್‍ಗೆ ಪ್ರಥಮ ಸ್ಥಾನ ನ ಲಭಿಸಿದೆ. ಜೋರ್ಡಾನಿನ ರಾಯಲ್ ಇಸ್ಲಾಮಿಕ್ ಸ್ಟ್ರಾಟಜಿಕ್ ಸ್ಟಡೀಸ್ ಸೆಂಟ್ ನಡೆಸಿದ ಸಮೀಕ್ಷೆಯಲ್ಲಿ ಉರ್ದುಗಾನ್ ಪ್ರಥಮ ಸ್ಥಾನಗಳಿಸಿದ್ದಾರೆ. 2019ರಲ್ಲಿ ಹೊರಬರಲಿರುವ ಗ್ರಂಥದಲ್ಲಿ ಪ್ರಭಾವಿ ಮುಸ್ಲಿಮರ ಪಟ್ಟಿ ಇರಲಿದೆ.

ಜಗತ್ತಿನಲಿ ಪ್ರಭಾವಿ 500 ಮುಸ್ಲಿಂ ನಾಯಕರ ಪಟ್ಟಿಯಲ್ಲಿ ಸೌದಿ ರಾಜಕುಮಾರ್, ಜೋರ್ಡಾನ್ ದೊರೆಯನ್ನು ಹಿಂದಿರಿಸಿ ಉರ್ದುಗಾನ್ ಪ್ರಥಮ ಸ್ಥಾನ ಪಡೆದರು. 2016 ಮತ್ತು 2017ರ ಪಟ್ಟಿಯಲ್ಲಿ ಉರ್ದುಗಾನ್ ಎಂಟನೆ ಸ್ಥಾನದಲ್ಲಿದ್ದರು. 2018ರಲ್ಲಿ ಐದನೆ ಸ್ಥಾನಕ್ಕೆ ಬಂದರು.

2019ರಲ್ಲಿ ಸೌದಿ ದೊರೆ ಸಲ್ಮಾನ್ ಬಿನ್ ಅಬ್ದುಲ್ ಅಝೀಝ್ ಎರಡನೆ ಸ್ಥಾನದಲ್ಲಿದ್ದಾರೆ. ಜೋರ್ಡಾನ್ ದೊರೆ ಅಬ್ದುಲ್ ಅಲ್ ಹುಸೈನ್ ಮೂರನೆ ಸ್ಥಾನದಲ್ಲಿದ್ದಾರೆ. 2009ರಿಂದ ಈ ಸಂಘಟನೆ ಪ್ರಭಾವಿ ಮುಸ್ಲಿಮರ ಕುರಿತ ಪುಸ್ತಕ ಪ್ರಕಟಿಸುತ್ತಿದೆ. ಜಗತ್ತಿನಾದ್ಯಂತ ಇರುವ ಮುಸ್ಲಿಂ ಸಮುದಾಯದಲ್ಲಿ ಪ್ರಭಾವ ಬೀರಿದ ಮುಸ್ಲಿಂ ನಾಯಕರನ್ನು ಸಮೀಕ್ಷೆಗೆ ಬಳಸಲಾಗುತ್ತಿದೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.