ಮೂರ್ಖ ಸರಕಾರ ಮಾತ್ರ ರಕ್ಷಣಾ ರಹಸ್ಯಗಳನ್ನು ಬಹಿರಂಗಪಡಿಸುತ್ತದೆ- ಚಿದಂಬರಂ

0
734

ಹೊಸದಿಲ್ಲಿ,ಮಾ.30: ಮೂರ್ಖ ಸರಕಾರ ಮಾತ್ರ ರಕ್ಷಣಾ ರಹಸ್ಯಗಳನ್ನು ಬಹಿರಂಗಗೊಳಿಸುತ್ತದೆ ಎಂದು ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ. ಇದೇ ವೇಳೆ ಅವರು ಬುದ್ಧಿಯಿರುವ ಸರಕಾರ ರಕ್ಷಣೆಗೆ ಸಂಬಂಧಿಸಿದ ವಿಚಾರಗಳನ್ನು ರಹಸ್ಯವಾಗಿಡುತ್ತದೆ ಎಂದರು . ಉಪಗ್ರಹ ಭೇದಕ ಮಿಸೈಲ್ ಪರೀಕ್ಷೆಯ ವಿವರವನ್ನು ತಿಳಿಸಿದ ಮೋದಿಯ ವಿರುದ್ಧ ಚಿದಂಬರಂ ವ್ಯಂಗ್ಯ ಚಾಟಿ ಬೀಸಿದರು.
ಉಪಗ್ರಹ ಬೇಧಿಸುವ ಮಿಸೈಲ್ ಪರೀಕ್ಷಿಸಿದ ನಾಲ್ಕನೆ ದೇಶ ಭಾರತವಾಗಿದೆ. ಅಮೆರಿಕ, ಚೀನ, ರಷ್ಯಾ ಇದಕ್ಕಿಂತ ಮೊದಲು ಯಸ್ವಿಯಾಗಿ ಪರೀಕ್ಷೆ ನಡೆಸಿದೆ ಎಂದು ನಿನ್ನೆ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಬಹಿರಂಗಪಡಿಸಿದ್ದರು.

ಇದರ ಬೆನ್ನಿಗೆ ಪಿ.ಚಿದಂಬರಂ ಪ್ರಧಾನಿಯನ್ನು ಟೀಕಿಸಿ ಟ್ವೀಟ್ ಮಾಡಿದ್ದಾರೆ. ಚುನಾವಣಾ ಆಯೋಗ ಮೋದಿ ಭಾಷಣ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಲ್ಲ ಎಂದು ಸ್ಪಷ್ಟಪಡಿಸಿತ್ತು.