ಹೊಸದಿಲ್ಲಿ,ಮಾ. 29: ಹಿಂದೂ ಸಮುದಾಯವನ್ನು ಅಪಮಾನಿಸಲು ಸಂಜೋತಾ ಎಕ್ಸ್ಪ್ರೆಸ್ ಸ್ಫೋಟ ಕೇಸು ಸೃಷ್ಟಿಸಲಾಯಿತು ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಇದಕ್ಕಾಗಿ ಕಾಂಗ್ರೆಸ್ ನಾಯಕರು ಕ್ಷಮೆಯಾಚಿಸಬೇಕೆಂದು ಅರುಣ್ ಜೇಟ್ಲಿ ಹೇಳಿದರು. ರಾಜಕೀಯ ಲಾಭಕ್ಕಾಗಿ ಹಿಂದೂ ಭಯೋತ್ಪಾದನೆ ಎಂಬ ಪದವನ್ನು ಕಾಂಗ್ರೆಸ್ ಸೃಷ್ಟಿಸಿತೆಂದು ಜೇಟ್ಲಿ ಆರೋಪಿಸಿದರು.
ಸುಳ್ಳು ಸಾಕ್ಷ್ಯಗಳನ್ನು ಸೃಜಿಸಿ ಹಿಂದೂ ಭಯೋತ್ಪಾದನೆಯಿದೆ ಎಂದು ತೋರಿಸಲು ಕಾಂಗ್ರೆಸ್ ಶ್ರಮಿಸಿತು. ಕೋರ್ಟು ಸಾಕ್ಷ್ಯಗಳ ಆಭಾವದಿಂದ ಪ್ರಕರಣದ ಆರೋಪಿಗಳನ್ನು ಖುಲಾಸೆ ಮಾಡಿದೆ. ಹಿಂದೂ ಭಯೋತ್ಪಾದನೆ ಇದೆ ಎಂದು ಸಾಬೀತು ಪಡಿಸಲು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟು ಹೇಳಿದೆ. ಪ್ರಕರಣದಲ್ಲಿ ನಿರಪರಾಧಿಗಳನ್ನು ಜೈಲಿಗೆ ಹಾಕಲಾಯಿತು. ನಿಜವಾದ ಆರೋಪಿಗಳು ತಪ್ಪಿಸಿಕೊಂಡರೆಂದು ಜೇಟ್ಲಿ ಹೇಳಿದರು. 2007 ಫೆಬ್ರುವರಿ 18ಕ್ಕೆ ಸಂಜೋತಾ ಎಕ್ಸ್ಪ್ರೆಸ್ನಲ್ಲಿ ಹರಿಯಾಣದ ಪಾಣಿಪತ್ನಲ್ಲಿ ಬಾಂಬುಸ್ಫೋಟಗೊಂಡು 68 ಮಂದಿ ಬಲಿಯಾಗಿದ್ದರು. ಎನ್ಐಎ ತನಿಖೆ ಮಾಡಿದ ಪ್ರಕರಣದಲ್ಲಿ 2011ರ ಜುಲೈಯಲ್ಲಿ ಸ್ವಾಮೀ ಅಸೀಮಾನಂದ ಸಹಿತ ಎಂಟು ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಇದರ ಸೂತ್ರಧಾರಿ ಎನ್ನಲಾದ ಸುನೀಲ್ ಜೋಷಿ ಗುಂಡೇಟಿಗೀಡಾಗಿ ಮೃತಪಟ್ಟಿದ್ದರು. ಮೂವರನ್ನು ಈವರೆಗೂ ಬಂಧಿಸಲು ಎನ್ಐಎಗೆ ಸಾಧ್ಯವಾಗಿಲ್ಲ.












