ಮಲತಂದೆಯಿಂದ ಏಳುವರ್ಷದ ಬಾಲಕನಿಗೆ ಹಲ್ಲೆ ಪ್ರಕರಣ: ಬಾಲಕ ಕೋಮಾದಲ್ಲಿ

0
949

ತೊಡುಪುಝ(ಕೇರಳ), ಮಾ. 30: ತೊಡುಪುಝದಲ್ಲಿ ಮಲತಂದೆಯಿಂದ ಕ್ರೂರವಾಗಿ ಹಿಂಸೆಗೊಳಗಾದ ಬಾಲಕನ ಮೆದುಳು ಸಾವು ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗು ಔಷಧಕ್ಕೆ ಸ್ಪಂಧಿಸುತ್ತಿಲ್ಲ. ಈವರೆಗೆ ವೆಂಟಿಲೇಟರ್‍ನ ಸಹಾಯದಲ್ಲಿ ಅದರ ಜೀವ ಉಳಿದಿದೆ ಎಂದು ವೈದ್ಯರು ತಿಳಿಸಿದರು. ಕೊಲಂಚೇರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಬಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಬಾಲಕನ ತಲೆ ಒಡೆದು ರಕ್ತ ಹರಿದದ್ದರಿಂದ ಹೊಟ್ಟೆ ಮತ್ತು ಹೃದಯಕ್ಕೆ ಹಾಗೂ ದೇಹದ 20ರಷ್ಟು ಭಾಗಗಳಿಗೆ ಗಂಭೀರ ಹಾನಿಯಾಗಿದೆ ಎಂದು ನ್ಯೂರೊ ಸರ್ಜನ್ ಡಾ. ಶ್ರೀಕುಮಾರ್ ನಿನ್ನೆ ಹೇಳಿದ್ದರು. ಬಾಲಕನನ್ನು ಮಲತಂದೆ ಎತ್ತಿ ಎಸೆದಿದ್ದನು ಮಾತ್ರವಲ್ಲ ಬಾಲಕ ತಲೆಯನ್ನು ಗೋಡೆಗೆ ಅಪ್ಪಳಿಸಿದ್ದಾನೆ. ನಂತರ ನೆಲಕ್ಕೆ ದೂಡಿಹಾಕಿ ತುಳಿದಿದ್ದಾನೆ.ಆದ್ದರಿಂದ ಮಗು ಗಂಭೀರ ಗಾಯಗೊಂಡಿದೆಯೆಂದು ಚಿಕಿತ್ಸೆ ನೀಡುವ ವೈದ್ಯರು ತಿಳಿಸಿದ್ದಾರೆ

ಘಟನೆಯಲ್ಲಿ ಪೊಲೀಸರು ಬಾಲಕನ ತಾಯಿ ಜೊತೆ ವಾಸಿಸುವ ಅರುಣ್ ಎಂಬಾತನನ್ನು ಬಂಧಿಸಿದ್ದಾರೆ. ಈತ ತಿರುವನಂತಪುರಂನ ನಂದನಕ್ಕೋಡ್ ಎಂಬಲ್ಲಿನ ನಿವಾಸಿಯಾಗಿದ್ದು ಇಂದು ಕೋರ್ಟಿಗೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.