ಜಮ್ಮು ಕಾಶ್ಮೀರ,ಮಾ. 30: ಶ್ರೀನಗರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಸ್ಫೋಟಗೊಂಡಿದೆ. ಜಮ್ಮು ಕಾಶ್ಮೀರ ರಾಂಬಾರ್ ಜಿಲ್ಲೆಯಲ್ಲಿ ಘಟನೆ ನಡೆದಿದ್ದು ಯಾರಿಗೂ ಅಪಾಯಗಳಾಗಿಲ್ಲ.
ಖಾಸಗಿ ವಾಹನದಲ್ಲಿ ಸ್ಫೋಟವಾಗಿದೆ ಎಂದುಪೊಲೀಸರು ತಿಳಿಸಿದರು. ಸ್ಫೋಟದ ಆಘಾತದಿಂದ ಕಾರು ಸಂಪೂರ್ಣ ಪುಡಿಪುಡಿಯಾಗಿದೆ.
ಚಾಲಕ ಮಾತ್ರ ಕಾರಿನಲ್ಲಿದ್ದ. ಆತನ ಅಪಾಯದಿಂದ ಪಾರಾಗಿದ್ದಾನೆಂದು ಪೊಲೀಸರು ಹೇಳಿದರು. ಸ್ಫೋಟದ ಕುರಿತ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.












