ಸಿಎಂ ಖಟ್ಟರ್ ವಾಹನಗಳನ್ನು ತಡೆದ ರೈತರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲು

0
191

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಡಿ.24: ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ ಖಟ್ಟರ್‌ರ ವಾಹನಗಳ ಸಾಲಿಗೆ ಅಡ್ಡಿಪಡಿಸಿ ಕಪ್ಪುಬಾವುಟ ಪ್ರದರ್ಶಿಸಿದ ರೈತರ ವಿರುದ್ಧ ಕೊಲೆಯತ್ನ , ಗಲಭೆ ಸೃಷ್ಟಿ ಯತ್ನ ಕೇಸು ದಾಖಲಿಸಲಾಗಿದೆ. 13 ರೈತರ ವಿರುದ್ಧ ಕೇಸು ಹಾಕಲಾಗಿದ್ದು ಮುಖ್ಯಮಂತ್ರಿಯ ವಾಹನದ ಕೆಲಸ ನಿರ್ವಹಣೆಗೆ ಅಡ್ಡಿಪಡಿಸಿ ಗಲಭೆ, ಕೊಲೆಗೆ ಯತ್ನಿಸಿದ್ದಾರೆ ಇತ್ಯಾದಿ ಒಂಬತ್ತು ಸೆಕ್ಷನ್ ಹಾಕಿ ಎಫ್‍ಐಆರ್ ದಾಖಲಿಸಲಾಗಿದೆ.

ರೈತರ ಧ್ವನಿಯನ್ನು ದಮನಿಸಲು ಸುಳ್ಳು ಕೇಸು ಹಾಕಲಾಗಿದೆ ಎಂದು ರೈತರು ಆರೋಪಿಸಿದ್ದು ಮಂಗಳವಾರ ಅಂಬಾಲದ ಖಟ್ಟರ್‌ರ ಸಾರ್ವಜನಿಕ ಸಭೆಗೆ ಮುಂಚಿತವಾಗಿ ಧಾರಾಳ ರೈತರು ಅಲ್ಲಿಗೆ ಬಂದಿದ್ದರು. ಕೇಂದ್ರ ಸರಕಾರದ ಮೂರು ಕೃಷಿ ಕಾನೂನುಗಳನ್ನು ವಾಪಾಸು ಪಡೆಯಬೇಕೆಂದು ಆಗ್ರಹಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಮಂಗಳವಾರ ರೈತರ ಸಂಘಟನೆಯ ನಾಯಕರ ಸಹಿತ ಹಲವು ಮಂದಿ ಅಂಬಲ ನಗರದ ಆನಜ್ ಮಂಡಿಯಲ್ಲಿ ಒಟ್ಟು ಸೇರಿದ್ದರು. ಮುಖ್ಯಮಂತ್ರಿ ಮತ್ತು ವಿಶಿಷ್ಟ ಅತಿಥಿಗಳ ಮೇಲೆ ಕೈಎತ್ತುವ ಪ್ರಯತ್ನ ನಡೆಯಬಹುದು ಎಂದು ಗಪ್ತಚರ ವರದಿಯೂ ಇತ್ತು. ನಂತರ ಕಾನೂನು ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸಬೇಕೆಂದು ಕರ್ತವ್ಯದಲ್ಲಿದ್ದ ಪೊಲೀಸರು ರೈತರಿಗೆ ಮೈಕ್‍ನಲ್ಲಿ ಕೂಗಿ ಹೇಳಿದ್ದರು.

ಆದರೆ ಅವರು ಆನಂದ್ ಮಂಡಿಯಲ್ಲಿ ಕಪ್ಪು ಬಾವುಟದೊಂದಿಗೆ ಅಗ್ರಸೆನ್ ಸ್ಕ್ವೇರ್‍‌ಗೆ ಹೊರಟರು. 12.30ಕ್ಕೆ ಮುಖ್ಯಮಂತ್ರಿಯ ವಾಹನ ಇಲ್ಲಿಗೆ ಬಂದೊಡನೆ ರೈತರು ತಡೆದರು. ಬೆದರಿಕೆಯೊಡ್ಡಿದರು. ಪೈಲಟ್ ವಾಹನಕ್ಕೆ ಹಾನಿ ಮಾಡಿದ್ದರು. ನಂತರ ಪೊಲೀಸರು ವಾಹನಗಳಿಗೆ ಹಾದು ಹೋಗಲು ವ್ಯವಸ್ಥೆ ಮಾಡಿಕೊಟ್ಟರು. ವಾಹನದ ದಾರಿಯನ್ನು ಬದಲಾಯಿಸಲು ಶ್ರಮಿಸಿದರು. ಗಲಭೆಕೋರರು ವಾಹನಗಳನ್ನು ತಡೆದು ಪೊಲೀಸರಿಗೂ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಆರೋಪ ಪಟ್ಟಿಯಲ್ಲಿ ಹೇಳಿದ್ದಾರೆ.