ಡಿವೈಎಫ್‍ಐ ನಾಯಕನ ಇರಿದು ಕೊಲೆ

0
309

ಸನ್ಮಾರ್ಗ ವಾರ್ತೆ

ಕಾಂಞಂಗಾಡ್,ಡಿ.24: ಕಾಂಞಂಗಾಡ್ ಕಲ್ಲೂರು ಎಂಬಲ್ಲಿ ರಾಜಕೀಯ ಘರ್ಷಣೆ ನಡೆದಿದ್ದು ಡಿವೈಎಫ್‍ಐ ಕಾರ್ಯಕತ ಅಬ್ದುರಹ್ಮಾನ್ ಔಫ್(32) ಎಂಬವರನ್ನು ಇರಿದು ಕೊಲೆ ಮಾಡಿದೆ. ಕೊಲೆಯನ್ನು ಪ್ರತಿಭಟಿಸಿ ನಗರ ಸಭೆಯ ವ್ಯಾಪ್ತಿಯಲ್ಲಿ ಎಲ್‍ಡಿಎಫ್ ಹರತಾಳ ಘೋಷಿಸಿದೆ.

ಬುಧವಾರ ರಾತ್ರೆ ಕಲ್ಲೂರಿನ ಮುಂಡತ್ತೋಡ್ ಲೀಗ್ ಮುಂಡತ್ತೋಡ್ ವಾರ್ಡ್ ಕಾರ್ಯದರ್ಶಿ ಮುಹಮ್ಮದ್ ಇರ್ಷಾದ್‍ಗೆ ಇರಿತವಾಗಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದರ ನಂತರ ರಾತ್ರೆ ಹನ್ನೊಂದು ಗಂಟೆಗೆ ಕೊಲೆಕೃತ್ಯ ನಡೆದಿದೆ. ಬೈಕಿನಲ್ಲಿ ಬರುತ್ತಿದ್ದ ಔಫ್ ಮತ್ತು ಗೆಳೆಯ ಶುಹೈಬ್‍ರನ್ನು ತಂಡವೊಂದು ತಡೆದು ನಿಲ್ಲಿಸಿ ಹಲ್ಲೆ ನಡೆಸಿದೆ. ಔಫ್ ಘಟನಾ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಶುಹೈಬ್ ದುಷ್ಕರ್ಮಿಗಳಿಗೆ ಹೆದರಿ ಓಡಿ ಪಾರಾದರು. ಈತನ ಮುಖಕ್ಕೂ ಗಾಯಗಳಾಗಿವೆ.

ಚುನಾವಣೆಯ ನಂತರ ಕಲ್ಲೂರಿನಲ್ಲಿ ಮುಸ್ಲಿಂ ಲೀಗ್-ಐಎನ್‍ಎಲ್, ಸಿಪಿಎಂ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿತ್ತು. ಮುಸ್ಲಿಂ ಲೀಗ್ ದಾಳಿಯ ಹಿಂದಿದೆ ಎಂದು ಸಿಪಿಎಂ ನಾಯಕರು ಆರೋಪಿಸಿದ್ದಾರೆ. ಮೃತ ಔಫ್ ಎರಡು ವರ್ಷದ ಹಿಂದೆ ಮದುವೆಯಾಗಿದ್ದರು. ಪತ್ನಿ ಶಾಹಿನಾ ಗರ್ಭಿಣಿಯಾಗಿದ್ದಾರೆ. ಮೃತ ಔಫ್ ಅಲಂಬಾಡಿ ಉಸ್ತಾದ್‍ರ ಮೊಮ್ಮಗನಾಗಿದ್ದಾರೆ.