ಸನ್ಮಾರ್ಗ ವಾರ್ತೆ
ಮುಂಬೈ: ಅದ್ದೂರಿ ಹಡಗನಲ್ಲಿದ್ದ ಆರ್ಯನ್ ಖಾನ್‍ನಿಂದ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೊ ಅಧಿಕಾರಿಗಳು ಮಾದಕ ವಸ್ತು ವಶಪಡಿಸಿಕೊಂಡಿಲ್ಲ ಎಂದು ಪ್ರಕರಣದ ಸಾಕ್ಷಿ ಕೆ.ಪಿ ಗೋಸಾವಿ ತನಗೆ ಹೇಳಿದ್ದಾನೆಂದು ಸ್ಯಾಂ ಡಿಸೋಜಾ ಹೇಳಿದ್ದಾರೆ. ನಾರ್ಕೊಟಿಕ್ಸ್ ಬ್ಯೂರೊ ಅಧಿಕಾರಿ ಗೋಸಾವಿ, ಪ್ರಕರಣದ ಇನ್ನೊಬ್ಬ ಸಾಕ್ಷಿ ಪ್ರಭಾಕರ್ ಸೈಲ್‍ನಂತೆ ಭ್ರಷ್ಟಾಚಾರಿಗಳಲ್ಲ ಎಂದು ಡಿಸೋಜಾ ಹೇಳಿದರು.
ಶಾರೂಕ್ ಖಾನ್ ನಿಂದ ಹಣ ಲಪಟಾಯಿಸಲು ಪ್ರಯತ್ನ ಇದು ಎಂದು ಪ್ರಭಾಕರ್ ಸೈಲ್ ಆರೋಪಿಸಿದ್ದ. ಈ ಆರೋಪದ ಭಾಗವಾಗಿ ಸ್ಯಾಂ ಡಿಸೋಜಾ ಹೆಸರು ವಿವಾದಕ್ಕೆಳೆದು ಬಂದಿತ್ತು.
ಕೆಪಿ ಗೋಸಾವಿ, ಸ್ಯಾಂ ಡಿಸೋಜಾ ಪರಸ್ಪರ 18 ಕೋಟಿಯ ಡೀಲ್ ಚರ್ಚೆ ನಡೆದಿತ್ತು ಎಂದು ಸೈಲ ಅಫಿದಾವಿತ್ ನೀಡಿದ್ದ. ಎಂಟು ಕೋಟಿ ಎನ್‍ಸಿಬಿ ಝೋನಲ್ ಡೈರಕ್ಟರ್ ಸಮೀರ್ ವಾಂಖಡೆಗೆ ಕೊಡಲು ಒಪ್ಪಂದವಾಗಿತ್ತು ಎಂದು ಸೈಲ್ ಆರೋಪಿಸಿದ್ದ. ಈ ಆರೋಪವನ್ನು ಸ್ಯಾಂ ಡಿಸೋಜಾ ನಿರಾಕರಿಸಿದ್ದಾರೆ.
ಗೋಸಾವಿ, ಪ್ರಭಾಕರ ಸೈ ಎನ್‍ಸಿಬಿ ಝೋನಲ್ ಆಫಿಸ್ ಸಮೀರ್ ವಾಂಖಡೆ ಹೆಸರಿನಲ್ಲಿ ತಮ್ಮ ನಂಬರ್ ಸೇವ್ ಮಾಡಿ ಪರಸ್ಪರ ಕರೆ ಮಾಡುತ್ತಿದ್ರು ಎಂದು ಡಿಸೋಜಾ ಹೇಳುತ್ತಿದ್ದಾರೆ. ವಾಂಖಡೆಗೆ ತಮ್ಮೊಂದಿಗೆ ಸಂಬಂಧ ಇಲ್ಲ ಎಂದು ತೋರಿಸಲು ಹೀಗೆ ಮಾಡುತ್ತಿದ್ದರು ಎಂದು ಡಿಸೋಜಾ ಹೇಳಿದರು. ಅಕ್ಟೋಬರ್ 3ರಂದು ಆರ್ಯನ್ ಖಾನ್ ಬಂಧಿಸಿದ ವಿವರ ನನಗೆ ತಿಳಿದು ಬಂತು. ಸಾಕ್ಷಿಯಾಗಿ ಸ್ಥಳದಲ್ಲಿದ್ದ ಡಿಸೋಜಾರಲ್ಲಿ ಆರ್ಯನ್ ತನ್ನ ಮ್ಯಾನೇಜರ್ ಪೂಜಾ ದಗ್ದಲಾನಿಗೆ ಕರೆ ಮಾಡಲು ಹೇಳಿದ್ದ. ಗೋಸಾವಿ ಆರ್ಯನ್‍ಗೆ ಸಂದೇಶ ಕೊಟ್ಟಿದ್ದ. ಆರ್ಯನ್ ಖಾನ್ ನಿರಪರಾಧಿಯಾಗಿದ್ದಾನೆ. ಮಾದಕ ವಸ್ತು ಹಿಡಿದಿಲ್ಲ ಎಂದು ಗೋಸಾವಿ ಅದೇ ಸಮಯದಲ್ಲಿ ನನಗೆ ಹೇಳಿದ್ದಾನೆ. ಆರ್ಯನ್ ಖಾನ್‍ಗೆ ನಾವು ಸಹಾಯ ಮಾಡೋಣ ಎಂದು ಗೋಸಾವಿ ಹೇಳಿದ್ದ ಎಂದು ಡಿಸೋಜಾ ತಿಳಿಸಿದು.
ಗೋಸಾವಿ ತಾನು ಮ್ಯಾನೇಜರ್ ಪೂಜಾ ದಗ್ದಲಾನಿ ಮತ್ತು ಅವರ ತಮ್ಮ ಮತ್ತು ಚಿಕ್ಕಿಪಾಂಡೆ ಎಂಬವರು ಲೋವರ್ ಪರಲೇಲಿನಲ್ಲಿ ಭೇಟಿಯಾಗಿದ್ದು, ಸುನೀಲ್ ಪಾಟೀಲ್ ಮೂಲಕ 50 ಲಕ್ಷ ರೂಪಾಯಿ ಗೋಸಾವಿಗೆ ಸಿಕ್ಕಿದೆ ಎಂದ ನನಗೆ ತಿಳಿಯಲು ಸಾಧ್ಯವಾಯಿತು ಎಂದು ಡಿಸೋಜಾ ಹೇಳಿದ್ದಾರೆ.












