ಮೊಬೈಲ್ ವೀಡಿಯೊ ಗೇಮ್ ಗೆ ಪಾಸ್‍ವರ್ಡ್ ನೀಡಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಯುವಕನನ್ನು ಕೊಂದು, ಸುಟ್ಟು ಹಾಕಿದ ಗೆಳೆಯರು

0
136

ಸನ್ಮಾರ್ಗ ವಾರ್ತೆ

ನವದೆಹಲಿ: ಮೊಬೈಲ್ ವಿಡಿಯೋ ಗೇಮ್ ನ ಪಾಸ್ ವರ್ಡ್ ನೀಡಲಿಲ್ಲ ಎಂಬ ಕಾರಣಕ್ಕೆ 18 ವರ್ಷದ ಪಪ್ಪು ದಾಸ್ ಎಂಬ ಯುವಕನನ್ನು ಕೊಂದು, ಸುಟ್ಟು ಹಾಕಿದ ಘಟನೆ ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಡೆದಿದೆ. ಪಪ್ಪು ದಾಸ್ ಜನವರಿ 8 ರಿಂದ ನಾಪತ್ತೆಯಾಗಿದ್ದರು.

ಪಪ್ಪು ದಾಸ್ ಮತ್ತು ಆತನ ಸ್ನೇಹಿತರು ಮೊಬೈಲ್ ಫೋನ್ ಗೇಮ್‌ಗಳ ದಾಸರಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸಾಕ್ಷ್ಯ ನಾಶಪಡಿಸಲು ಆತನನ್ನು ಕೊಂದು ಬಳಿಕ ದೇಹವನ್ನು ಸುಟ್ಟು ಹಾಕಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪಪ್ಪು ದಾಸ್ ಫರಕ್ಕಾ ಬ್ಯಾರೇಜ್ ಕ್ವಾರ್ಟರ್ಸ್‌ಗೆ ವಿಡಿಯೋ ಗೇಮ್ ಆಡಲು ಬಂದಿದ್ದು, ಆತನ ಸ್ನೇಹಿತರು ಗೇಮ್ ಐಡಿ ಮತ್ತು ಪಾಸ್‌ವರ್ಡ್ ಕೇಳಿದ್ದಾರೆ. ಇದನ್ನು ಕೊಡದ ಕಾರಣಕ್ಕೆ ದ್ವೇಷದ ಹಿನ್ನೆಲೆಯಲ್ಲಿ ಸ್ನೇಹಿತರು ಆತನನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 8ರಂದು ಪಪ್ಪು ದಾಸ್ ಕಾಣೆಯಾಗಿದ್ದ. ಈತನ ಗೆಳೆಯರಲ್ಲಿ ವಿಚಾರಿಸಿದಾಗ ಗೊತ್ತಿಲ್ಲ ಎಂದು ಪಪ್ಪು ದಾಸನ ಮನೆಮಂದಿಗೆ ಅವರು ಹೇಳಿದ್ದಾರೆ. ಈ ಕುರಿತು ಜನವರಿ 11ಕ್ಕೆ ಪೊಲೀಸರಿಗೆ ದೂರು ನೀಡಲಾಗಿತ್ತು. ತನಿಖೆಯಲ್ಲಿ ಸುಟ್ಟು ಹೋದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.