ಪ್ರಭಾಕರ್ ಭಟ್ಟ್ ರ ಪರ ಕೇಸು ವಾದಿಸಿದ ವಕೀಲರನ್ನು ಹೊರಗಟ್ಟಿದ ಕಾಂಗ್ರೆಸ್

0
3949

ಸನ್ಮಾರ್ಗ ವಾರ್ತೆ

ಮಂಗಳೂರು, ಜ. 19: ಕಲ್ಲಡ್ಕ ಭಟ್ ರ ಪರ ಕೇಸು ವಾದಿಸಿದ ವಕೀಲ ಚಂದ್ರೇಗೌಡ ಅವರನ್ನು ಕಾಂಗ್ರೆಸ್ ಹೊರಗೆ ಹಾಕಿದೆ. ಕಲ್ಲಡ್ಕ ಪ್ರಭಾಕರ್ ಭಟ್ ಪ್ರಕರಣದಲ್ಲಿ ವಾದಿಸಿ ಉಚ್ಚಾಟನೆಗೊಂಡ ಚಂದ್ರೇಗೌಡರು ಶ್ರೀರಂಗಪಟ್ಟಣ ಜಿಲ್ಲಾ ಸೆಶನ್ಸ್ ಕೋರ್ಟಿನಲ್ಲಿ ಕಾಂಗ್ರೆಸ್ ಲೀಗಲ್ ಸೆಲ್ ಶ್ರೀರಂಗಪಟ್ಟಣ ನಗರ ಅಧ್ಯಕ್ಷರಾಗಿದ್ದರು.

ಡಿಸೆಂಬರ್ 24ಕ್ಕೆ ಭಟ್ ರ ಭಾಷಣದಲ್ಲಿ ಮುಸ್ಲಿಮ್ ಮಹಿಳೆಯರ ಕುರಿತು ಅವಹೇಳನಕಾರಿ ಮಾತುಗಳನ್ನಾಡಿದ್ದರು. ಮುಸ್ಲಿಮರಿಗೆ ದಿನಕ್ಕೊಬ್ಬ ಗಂಡ ಮೋದಿ ಅವರಿಗೆ ಪರ್ಮನೆಂಟ್ ಗಂಡ ಕೊಟ್ಟದ್ದು ಎಂದು ಅವರು ಹನುಮಾನ್ ಜಯಂತಿ ಸಮಿತಿಯ ಕಾರ್ಯಕ್ರಮದ ಸಂಕೀರ್ತನಾ ಯಾತ್ರೆ ಉದ್ಘಾಟಿಸಿ ಮಾತನಾಡಿದ್ದರು.

ಸಾಮಾಜಿಕ ಕಾರ್ಯಕರ್ತೆ ನಜ್ಮಾ ನಝೀರ್ ಭಟ್ಟರ ವಿರುದ್ಧ ದೂರು ನೀಡಿದ್ದರು. ಮೋದಿ ಮುತ್ತಲಾಕ್ ವಿರುದ್ಧ 2019ರಲ್ಲಿ ಕಾನೂನು ತಂದು ನಿಷೇಧಿಸಿದ್ದರು. ಮುಸ್ಲಿಂ ಮಹಿಳೆಯರಿಗೆ ಆನಂತರ ಪರ್ಮನೆಂಟ್ ಗಂಡ ಸಿಕ್ಕಿದ್ದು ಎಂದು ಭಟ್ ಹೇಳಿದ್ದರು. ಇಬ್ಬರು ವ್ಯಕ್ತಿಗಳ ಜಾಮೀನು ಎರಡು ಲಕ್ಷ ರೂಪಾಯಿ ಬಾಂಡ್‍ನಲ್ಲಿ ಬುಧವಾರ ಕೋರ್ಟು ಜಾಮೀನು ಮಂಜೂರು ಮಾಡಿತ್ತು. ನಂತರ ಶುಕ್ರವಾರ ಚಂದ್ರೇಗೌಡರನ್ನು ಕಾಂಗ್ರೆಸ್ ಲೀಗಲ್ ಸೆಲ್ ಮಂಡ್ಯ ಜಿಲ್ಲಾ ಅಧ್ಯಕ್ಷ ಎ ಎಸ್ . ಗೌರಿಶಂಕರ್ ಉಚ್ಚಾಟಿಸಿದ್ದಾರೆ.