ವಿಯೆಟ್ನಾಮ್‍ ನಲ್ಲಿ ಅಕ್ಕಿ ಎ ಟಿ ಎಂ: ಕೊರೋನಾ ಎದುರಿಸಲು ವಿನೂತನ ಪ್ರಯೋಗ

0
962

ಸನ್ಮಾರ್ಗ ವಾರ್ತೆ

ವಿಯೆಟ್ನಾಂ, ಎ. 15: ವಿಯಟ್ನಾಂನಲ್ಲಿ 269 ಮಂದಿಗೆ ಕೊರೊನಾ ದೃಢಪಟ್ಟಿದೆ. ಮಾರ್ಚ್ 31ಕ್ಕೆ ಇಲ್ಲಿ ಲಾಕ್ ಡೌನ್ ಆರಂಭವಾಗಿತ್ತು. ಕೊರೊನಾದಿಂದ ಮನೆಯೊಳಗೆ ಉಳಿಯುವಂತಾದರೂ ಅಕ್ಕಿ ಸಿಗದಂತಾಗಬಾರದು ಎಂದು ವಿಯೆಟ್ನಾಮ್‍ನಲ್ಲಿ ಅಕ್ಕಿಗೂ ಎಟಿಎಂ ವ್ಯವಸ್ಥೇಯನ್ನು ಜಾರಿಗೆ ತರಲಾಗಿದೆ. ಅಗತ್ಯವಿರುವವರಿಗೆ ಉಚಿತ ಅಕ್ಕಿ ಕೊಡುವ ಎಟಿಎಂಗಳು ದಿನದ 24 ಗಂಟೆ ಕಾರ್ಯಾಚರಿಸುತ್ತಿವೆ.

ಈ ಅಕ್ಕಿ ಎಟಿಎಂ ಒಬ್ಬನಿಗೆ ಒಮ್ಮೆಗೆ 1 ಕೆಜಿ ಅಕ್ಕಿ ಮಾತ್ರ ಕೊಡುತ್ತಿದೆ. ಎಲ್ಲರಿಗೂ ಅಕ್ಕಿ ಸಿಗುವಂತಾಗಬೇಕೆಂದು ಒಂದು ಕೆಜಿ ಅಕ್ಕಿಗೆ ಎಟಿಎಂ ಸೀಮಿತವಾಗಿರಿಸಲಾಗಿದೆ. ಹೊಚಿಮಿನ್ ಸಿಟಿಯ ಹಾಂಗ್ ಟುವಾನ್ ಅನ್ಹ್ ಅವರು ಈ ಅಕ್ಕಿ ಎಟಿಎಂ ರೂವಾರಿಯಾಗಿದ್ದಾರೆ.

ಹೊಮಿಚಿಮಿನ್ ಸಿಟಿಯಲ್ಲಿ, ಮಾತ್ರವಲ್ಲ ಹಾನೊಯ್, ಹ್ಯೂ, ಡಾನಂಗ್ ನಗರಗಳಲ್ಲಿ ಅಕ್ಕಿ ಎಟಿಎಂಗಳನ್ನು ಸ್ಥಾಪಿಸಲಾಗಿದೆ ಎಂದು ವಿಯೆಟ್ನಾಮ್‍ ಮಾಧ್ಯಮಗಳನ್ನು ಉದ್ಧರಿಸಿ ರಾಯಿಟರ್ಸ್ ವರದಿ ಮಾಡಿದೆ. ಜನರಿಗೆ ಅಕ್ಕಿ ತೆಗೆದುಕೊಳ್ಳಲು ಇದರಿಂದ ಸಾಧ್ಯವಾಗುತ್ತಿರುವುದರಿಂದ ಇದನ್ನು ತಾನು ಅಕ್ಕಿ ಎಟಿಎಂ ಎಂದು ಕರೆಯುತ್ತಿದ್ದೇನೆ ಎಂದು ಅನ್ಹ್ ಹೇಳಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.