ಕರಾಚಿ: ಪಾಕಿಸ್ತಾನದ ನ್ಯಾಯಾಲಯವೊಂದು ಅಂತಾರಾಷ್ಟ್ರೀಯ ಖ್ಯಾತಿಯ ಪಾಕಿಸ್ತಾನದ ಮಾಡೆಲ್ ಅಯಾನ್ ಅಲಿಯನ್ನು ಕರೆನ್ಸಿ ಕಳ್ಳಸಾಗಾಟ ಪ್ರಕರಣದಲ್ಲಿ ಘೋಷಿತ ಅಪರಾಧಿಯೆಂದು ಹೇಳಿದೆ. ಶನಿವಾರ ಕೋರ್ಟು ವಿಚಾರಣೆಯವೇಳೆ ಅಯಾನ್ ಅಲಿಯವರ ವಕೀಲರಾದ ಶೌಕತ್ ಅಬ್ಬಾಸ್ ಮತ್ತು ಮುಹಮ್ಮದ್ ನವಾಝ್ ಮತ್ತು ಸರಕಾರಿ ಅಭಿಯೋಜಕರಿಗೆ ಪ್ರಕರಣದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಅಲಿ ವಿಚಾರಣೆಯ ವೇಳೆ ನಿರಂತರ ಅನುಪಸ್ಥಿತಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ಅವರಿಗೆ ಪತ್ರ ಬರೆಯಲಾಗಿತ್ತು ಮತ್ತು ಕೋರ್ಟಿಗೆ ಹಾಜರಾಗಲು ಅವರಿಗೆ ಎರಡು ತಿಂಗಳ ಅವಕಾಶ ನೀಡಲಾಗಿತ್ತು, ಆದರೂ ಅವರು ಕೋರ್ಟಿಗೆ ಹಾಜರಾಗಿಲ್ಲ ಎಂದು ನ್ಯಾಯಾಧೀಶರು ಹೇಳಿದರು.
ಇದೇ ವೇಳೆ ಕೋರ್ಟು ಕಾಯಂ ಬಂಧನ ವಾರೆಂಟ್ ಹೊರಡಿಸಿದೆ. ಮುಂದಿನ ವಿಚಾರಣೆಯ ವೇಳೆ ಹಾಜರಿರುವಂತೆ ಸಾಕ್ಷಿಗಳಿಗೆ ಸಮನ್ಸ್ ಹೊರಡಿಸಿದೆ. ಕಾಯಂ ಬಂಧನ ಆದೇಶ ಪ್ರಕಾರ ಅಯಾನ್ ಅಲಿ ಪಾಕಿಸ್ತಾನಕ್ಕೆ ಪ್ರವೇಶಿಸಿದೊಡನೆ ಬಂಧನಕೊಳಗಾಗಲಿದ್ದಾರೆ.
ಅವರ ಕರಾಚಿಯ ಪ್ಲಾಟ್ ಮಾರಾಟವನ್ನು ಸ್ಥಗಿತಗೊಳಿಸುವಂತೆ ನ್ಯಾಯಾಲಯ ಸಂಬಂಧಿಸಿದ ಇಲಾಖೆಗಳಿಗೆ ಆದೇಶಿಸಿದ್ದು ಪ್ರಕರಣದ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ. ಕಳೆದ ಫೆಬ್ರುವರಿಯಲ್ಲಿ ಸರಕಾರಿ ವಕೀಲಯರು ಅಯಾನ್ ಅಲಿಯನ್ನು ಘೋಷಿತ ಅಪರಾಧಿಯೆಂದು ಹೆಸರಿಸಲು ಕೋರ್ಟಿಗೆ ಮನವಿಮಾಡಿದ್ದರು. ಅಂದು ಅಯಾನ್ ಅಲಿಯ ವಕೀಲರು ಆಕೆ ಅನಾರೋಗ್ಯದಿಂದಾಗಿ ಕೋರ್ಟಿಗೆ ಹಾಜರಾಗಿಲ್ಲ ಎಂದು ತಿಳಿಸಿದರು. ಅಲಿಯನ್ನು 2005 ಮಾರ್ಚ್ 14ರಂದು ಅನಧಿಕೃತವಾಗಿ 500,000ಡಾಲರ್ ಸಾಗಾಟ ನಡೆಸಲು ಯತ್ನಿಸಿದ ವೇಳೆ ಇಸ್ಲಾಮಾಬಾದ್ ವಿಮಾನನಿಲ್ದಾಣದಲ್ಲಿ ಬಂಧಿಸಲಾಗಿದೆ.












