ಉದ್ದೇಶಪೂರ್ವಕವಾಗಿ 5 ನಿಮಿಷ ಆಕ್ಸಿಜನ್ ಸಂಪರ್ಕ ತೆಗೆದ ಬಳಿಕ 22 ರೋಗಿಗಳು ಮೃತ್ಯು: ಉ. ಪ್ರದೇಶದ ಆಗ್ರಾದಲ್ಲಿ ನಡೆದ ಘಟನೆ

0
847

ಆಸ್ಪತ್ರೆ ಮಾಲಕನ ವೀಡಿಯೊ ವೈರಲಾದ ನಂತರ ಘಟನೆ ಬೆಳಕಿಗೆ 

ಸನ್ಮಾರ್ಗ ವಾರ್ತೆ

ಲಕ್ನೊ: ಮರಣಾಸನ್ನ ಸ್ಥಿತಿಯಲ್ಲಿದ್ದ ರೋಗಿಗಳ ಆಕ್ಸಿಜನ ಸಂಪರ್ಕವನ್ನು ತೆಗೆಯಲಾಯಿತು ಎಂದು ಆಸ್ಪತ್ರೆಯ ಮಾಲಕನ ವೀಡಿಯೊವೊಂದು ವೈರಲಾದ ನಂತರ ತನಿಖೆಗೆ ಆದೇಶಿಸಲಾಗಿದೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದೆ.

ಆಸ್ಪತ್ರೆಗೆ ಆಕ್ಸಿಜನ್ ಅಲಭ್ಯವಾದ ಹಿನ್ನೆಲೆಯಲ್ಲಿ 22 ರೋಗಿಗಳು ಮೃತಪಟ್ಟಿದ್ದರು. ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದಾರೆ. ಆದರೆ ಉದ್ದೇಶಪೂರ್ವಕವಾಗಿ ರೋಗಿಗಳಿಗೆ ಆಕ್ಸಿಜನ್ ಕೊಟ್ಟಿರಲಿಲ್ಲ ಎಂದು ಇದರಿಂದ ಬೆಳಕಿಗೆ ಬಂದಿದೆ. ಕೊರೊನ ರೋಗಿಗಳ ಮತ್ತು ಇತರ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಕ್ಸಿಜನ್ ಸಿಗದೆ ಯಾರೆಲ್ಲ ಬದುಕುತ್ತಾರೆ ಎಂದು ಪರೀಕ್ಸಿಸಲು ಆಕ್ಸಿಜನ್ ಸಂಪರ್ಕ ಕಡಿದದ್ದೆಂದು ಮಾಲಕ ವೀಡಿಯೊದಲ್ಲಿ ಹೇಳಿದ್ದಾನೆ.

ಬಹಳ ಆಕ್ಸಿಜನ್ ಕೊರತೆ ಇತ್ತು. ನಿರಂತರ ಮನವಿ ಮಾಡಿಯೂ ರೋಗಿಗಳ ಡಿಸ್ಚಾರ್ಜ್‍ಗೆ ಸಂಬಂಧಿಕರು ಒಪ್ಪಲಿಲ್ಲ. ನಾವು ಪರೀಕ್ಷೆ ಮಾಡಲು ಹೊರಟೆವು. ಮ್ಯಾಕ್‍ಡ್ರಿಲ್ ನಡೆಸಲು ತೀರ್ಮಾನಿಸಿದೆವು. ಎಪ್ರಿಲ್ 26ರಂದು ಬೆಳಗ್ಗೆ ಏಳು ಗಂಟೆಗೆ ಐದು ನಿಮಿಷ ಆಕ್ಸಿನ್ ವಿತರಣೆ ನಿಲ್ಲಿಸಿದೆವು. 22 ರೋಗಿಗಳ ದೇಹ ನೀಲಿ ಬಣ್ಣಕ್ಕೆ ಹೊರಳತೊಡಗಿತು. ಜೊತೆಗೆ ಉಸಿರಾಟ ನಿಲ್ಲಲು ಆರಂಭವಾಯಿತು. ಇದರಿಂದ ಆಕ್ಸಿಜನ್ ಇಲ್ಲದೆ ಅವರು ಜೀವಿಸಲಾರರು ಎಂದು ಮನವರಿಕೆಯಾಯಿತು. ಇದರೊಂದಿಗೆ 74 ಆಕ್ಸಿಜನ್ ರೋಗಿಗಳ ಸಂಬಂಧಿಕರೇ ಆಕ್ಸಿಜನ್ ತಂದುಕೊಡಬೇಕೆಂದು ಹೇಳಿದೆವು ಎಂದು ಪಾರಸ್ ಆಸ್ಪತ್ರೆಯ ಮಾಲಕ ಆರಿಂಜಯ್ ಜೈನ್ ಹೇಳುತ್ತಾರೆ.

ವೀಡಿಯೊ ವೈರಲ್ ಆಗುವುದರೊಂದಿಗೆ ಆಗ್ರ ಮುಖ್ಯ ವೈದ್ಯಾಧಿಕಾರಿ ಡಾ. ಆರ್‍ಸಿ ಪಾಂಡೆ ಸಮಿತಿಯೊಂದನ್ನು ರೂಪಿಸಿ ತನಿಖೆಗೆ ಆದೇಶಿಸಿದ್ದಾರೆ. ಇದೇ ವೇಳೆ ವೀಡಿಯೊ ವೈರಲಾಗಿರುವುದನ್ನು ಕಂಡು ಜೈನ್ ರಂಗ ಪ್ರವೇಶಿಸಿದ್ದು ಮರಣಾಸನ್ನ ರೋಗಿಗಳನ್ನು ಗುರುತಿಸಿ ಅವರಿಗೆ ಉನ್ನತ ಚಿಕಿತ್ಸೆ ನೀಡಲು ಮಾಕ್ಡ್ರಿಲ್ ಮಾಡಿದ್ದೆಂದು ಹೇಳಿದ್ದಾರೆ.