ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ಕೊರೊನದ ಮೂರನೇ ಅಲೆಯು ಮಕ್ಕಳನ್ನೇ ಹೆಚ್ಚು ಬಾಧಿಸುತ್ತದೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಡಾ.ವಿಕೆ ಪಾಲ್ ರವರು ಇಂಡಿಯ ಟುಡೆ ಟಿವಿಗೆ ತಿಳಿಸಿದ್ದಾರೆ. ವಿ.ಕೆಪಾಲ್ ಪ್ರಧಾನಿಯ ಕೊರೊನ ಮ್ಯಾನೇಜ್ಮೆಂಟ್ ತಂಡದ ಪ್ರಮುಖ ಸದಸ್ಯರಾಗಿದ್ದಾರೆ.
ಮೂರನೇ ಅಲೆಯು ಮಕ್ಕಳನ್ನೆ ಹೆಚ್ಚು ಬಾಧಿಸುತ್ತದೆ ಎಂಬ ವರದಿಗಳು ಬರುತ್ತಿದ್ದಂತೆ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಿರಿಯರಂತೆ ಮಕ್ಕಳನ್ನೂ ಮೂರನೇ ಅಲೆ ಬಾಧಿಸುತ್ತದೆ ಎಂದು ಹೇಳಿದ್ದಾರೆ.
ದಿಲ್ಲಿ ಏಮ್ಸ್ ನಿರ್ದೇಶಕ ಡಾ. ರಣ್ದೀಪ್ ಗುಲೇರಿಯ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು ಮಕ್ಕಳಿಗೆ ಹೆಚ್ಚು ಮೂರನೇ ಅಲೆ ಬಾಧಿಸುವುದಕ್ಕೆ ಸಾಕ್ಷ್ಯವೇನಿಲ್ಲ ಎಂದಿದ್ದಾರೆ. ಮೂರನೇ ಅಲೆ ಮಕ್ಕಳಿಗೆ ಹೆಚ್ಚು ಬಾಧಿಸುತ್ತದೆ ಎಂಬ ವರದಿಯಾದ ಹಿನ್ನೆಲೆಯಲ್ಲಿ ಕೆಲವು ರಾಜ್ಯಗಳು ಮಕ್ಕಳ ರೋಗ ತೀವ್ರ ಉಪಚಾರ ವಿಭಾಗಗಳನ್ನು ಸಜ್ಜುಗೊಳಿಸಿಟ್ಟಿವೆ. ಪರಿಸ್ಥಿತಿ ಹೀಗಿರುವಾಗ ತಜ್ಞರು ಈ ಬೇರೆಯೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.