ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಎ.17: ಇದುವರೆಗೆ ವಿದೇಶಗಳಲ್ಲಿ 3,336 ಮಂದಿ ಅನಿವಾಸಿ ಭಾರತೀಯರಿಗೆ ಕೊರೊನಾ ಬಾಧಿಸಿದ್ದು 53 ದೇಶಗಳಲ್ಲಿ 25 ಮಂದಿ ಮೃತಪಟ್ಟಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿದೇಶದಲ್ಲಿರುವ ಭಾರತೀಯರನ್ನು ಕರೆತರಲು ಸಾಧ್ಯವಿಲ್ಲ ಎಂದು ಸರಕಾರದ ಮೂಲಗಳು ಹೇಳಿವೆ. ವೈರಸ್ ಹರಡುವಿಕೆ ತಡೆಯಲು ಬೃಹತ್ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆದ್ದರಿಂದ ಸರಕಾರ ತೀರ್ಮಾನದಲ್ಲಿ ಅಚಲವಾಗಿದೆ. ಇದೇವೇಳೆ 55 ದೇಶಗಳಿಗೆ ಮಲೇರಿಯ ಮದ್ದು ಹೈಡ್ರೊಕ್ಸಿ ಕ್ರೊರೊಕ್ವಿನ್ ರಫ್ತಿಗೆ ಸರಕಾರ ನಿರ್ಧರಿಸಿದೆ. ದೇಶವೇ ಗಂಭೀರ ಪರಿಸ್ಥಿತಯಲ್ಲಿದೆ. ಆದ್ದರಿಂದ ಈ ಮದ್ದು ರಫ್ತು ನಿಷೇಧಿಸಲಾಗಿತ್ತು. ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆಯೊಡ್ಡಿದ ಬಳಿಕ ರಫ್ತು ನಿಷೇಧವನ್ನು ತೆರವುಗೊಳಿಸಲಾಗಿತ್ತು.
ನಂತರ ಕೆಲವು ದೇಶಗಳಿಗೆ ಈ ಮದ್ದಿನ ರಫ್ಟಿಗೆ ಅನುಮತಿ ಕೊಡಲಾಗಿದೆ. ಸಾಕಷ್ಟು ಸ್ಟಾಕ್ ಇದೆ. ಆದ್ದರಿಂದ ಮಲೇರಿಯ ಮದ್ದಿನ ಕೊರತೆ ಭಾರತದಲ್ಲಾಗದು ಎಂದು ಸರಕಾರದ ಮೂಲಗಳು ಹೇಳಿವೆ.
ಓದುಗರೇ, sanmaraga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












