ಸೀತಾಪುರ,ಎ.10: ಮಹಿಳಾ ಪೊಲೀಸ್ ಅಧಿಕಾರಿಗೆ ಹೊಡೆದ ಘಟನೆಯಲ್ಲಿ ಉತ್ತರಪ್ರದೇಶದಲ್ಲಿ ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ರೀಟಾಕುಮಾರಿ ಎನ್ನುವ ಮಹಿಳಾ ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಲಾಗಿದೆ. ಉತ್ತರ ಪ್ರದೇಶದ ಸೀತಾ ಪುರ ಜಿಲ್ಲಾಸ್ಪತ್ರೆಯಲ್ಲಿ ಮಂಗಳವಾರ ಘಟನೆ ನಡೆದಿದೆ. ಆಸ್ಪತ್ರೆಯ ಒಳಗೆ ಹೋಗಲು ಬಿಡಲಿಲ್ಲ ಎಂಬುದು ಮಹಿಳೆಯರನ್ನು ರೇಗಿಸಿತ್ತು. ನಂತರ ಅವರು ರೀಟಾಕುಮಾರಿ ಮೇಲೆ ಹಲ್ಲೆ ನಡೆಸಿದರು. ಮೂವರು ಮಹಿಳೆಯರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.












