“ಪ್ರಧಾನಿ ಮೋದಿ ಸುಳ್ಳು ಉತ್ಪಾದಿಸುವ ಫ್ಯಾಕ್ಟರಿಯ ಮಾಲಕ!”- ಉವೈಸಿಯಿಂದ ಟೀಕಾಪ್ರಹಾರ- ವೀಡಿಯೊ

0
1776

ಹೈದರಾಬಾದ್,ಎ.9: ಆಲ್ ಇಂಡಿಯ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸದುದ್ದೀನ್ ಉವೈಸಿ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕಾ ಪ್ರಹಾರ ಮಾಡಿದ್ದು ಪ್ರಧಾನಿ ನರೇಂದ್ರ ಮೋದಿ ಅಸತ್ಯಗಳನ್ನು ಉತ್ಪಾದಿಸುವ ಫ್ಯಾಕ್ಟರಿಯ ಮಾಲಕ ಎಂದು ಹೇಳಿದ್ದಾರೆ.ಮಕ್ಕಳಿಗೆ ಹೇಳುವಂತೆ ಮೋದಿ ಸುಳ್ಳು ಕತೆಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಅವರು ಚುನಾವಣಾ ರ್ಯಾಲಿಯಲ್ಲಿ ಮಾತಾಡುತ್ತಾ ಹೇಳಿದರು.

ಬಿಜೆಪಿ ಉದ್ಯೋಗ ಕೊಡುವುದಿಲ್ಲ. ಸುಳ್ಳು ಪ್ರಚಾರ ಮಾಡುತ್ತಿದೆ. ಆರ್ಟಿಕಲ್ 37 ಮತ್ತು 35ನ್ನು ಇಲ್ಲದಾಗಿಸುತ್ತೇವೆಂದು ಅವರು ಹೇಳುತ್ತಿದ್ದಾರೆ. ಈಗಿರುವ ಸಂವಿಧಾನದ ಪ್ರಕಾರ ಬಿಜೆಪಿಗೆ ಹೀಗೆ ಮಾಡಲು ಸಾಧ್ಯವೇ ಇಲ್ಲ. ಮೆಹಬೂಬ ಮುಫ್ತಿ ಸರಕಾರದಿಂದ ಬಿಜೆಪಿ ಪಲಾಯನ ಹೂಡಿ ಪಾರಾಯಿತು. ಆದರೆ 370ನೆ ವಿಧಿಯ ವಿರುದ್ಧ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎಂದು ಉವೈಸಿ ಹೇಳಿದರು. ಜಮ್ಮು ಕಾಶ್ಮೀರದ ಭಾರತವನ್ನು ವಿಲೀನಗೊಳಿಸುವ ಬಿಜೆಪಿಯ ಚುನಾವಣಾ ಪ್ರಣಾಳಿಯ ವಾಗ್ದಾನ ಸುಳ್ಳಾಗಿದೆ. ಲವ್ ಜಿಹಾದ್‍ನ ಹೆಸರಿನಲ್ಲಿ ದಾಳಿ ಮಾಡಿದಾಗಲೂ, ದನದ ಹೆಸರಿನಲ್ಲಿ ಜನರ ಹತ್ಯೆಯಾದಾಗಲೂ ಮೋದಿ ಮೌನಿಯಾಗಿದ್ದರು. ಆ ಸಮಯದಲ್ಲಿ ಸಂವಿಧಾನಿಕ ಜವಾಬ್ದಾರಿಯನ್ನು ಅವರು ನಿರ್ವಹಿಸಿಲ್ಲ ಎಂದು ಉವೈಸಿ ಆರೋಪಿಸಿದರು. ಶಬರಿಮಲೆ ವಿಷಯವು ವಿಶ್ವಾಸಕ್ಕೆ ಸಂಬಂಧಿಸಿದ್ದು, ಆಚಾರದಲ್ಲಿ ಬದಲಾವಣೆ ಮಾಡಲು ಅವರು ಒಪ್ಪುವುದಿಲ್ಲ. ಆದರೆ ಮುತ್ತಲಾಕ್ ವಿಷಯದಲ್ಲಿ ಈ ನಿಲುವು ಅದಕ್ಕಿಲ್ಲ. ಮುತ್ತಲಾಕ್ ಕೂಡ ಧರ್ಮಕ್ಕೆ ಸಂಬಂಧಿಸಿದ ವಿಷಯವಲ್ಲವೇ ಎಂದು ಉವೈಸಿ ಪ್ರಶ್ನಿಸಿದರು.