ಅಲ್-ಅಕ್ಸಾವನ್ನು ವಿಭಜಿಸಲು ಇಸ್ರೇಲ್ ಷಡ್ಯಂತ್ರ ರಚಿಸುತ್ತಿದೆ: ಫೇಲಸ್ತೀನ್ ಸಚಿವರ ಗಂಭೀರ ಆರೋಪ

0
1039

ರಮಲ್ಲಾಹ್,ಫೇಲಸ್ತೀನ್: ಪೂರ್ವ ಜೆರುಸಲೆಮ್ ನ ವಿವಾದಿತ ಅಲ್-ಅಕ್ಸಾ ಮಸೀದಿಯನ್ನು ವಿಂಗಡಿಸಲು ಇಸ್ರೇಲಿ ಯೋಜನೆಗಳನ್ನು ರೂಪಿಸುತ್ತಿದೆ ಎಂದು ಫೆಲಸ್ತೀನ್ ಸಚಿವ ಹೇಳಿದ್ದಾರೆ.

ಜೆರುಸಲೇಂನ ಹಳೆಯ ನಗರದ ಪೂರ್ವ ಗೋಡೆಯ ಮೇಲಿರುವ “ಬಾಬ್ ಅಲ್-ರಹಮಾ ಪ್ರದೇಶವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ” ಎಂದು ಜೆರುಸಲೇಂ ವ್ಯವಹಾರಗಳ ಸಚಿವ ಅದ್ನಾನ್ ಅಲ್-ಹುಸೇನಿ ಪಶ್ಚಿಮ ತೀರ ನಗರದ ರಮಾಲ್ಲಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇಸ್ರೇಲಿ ಅಧಿಕಾರಿಗಳು ಈ ಪ್ರದೇಶವನ್ನು ಯಹೂದಿ ಸಿನಗಾಗ್ ಆಗಿ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆಂದು ಅವರು ಹೇಳಿದರು.

“ಬಾಬ್ ಅಲ್-ರಹಮಾವನ್ನು ಪರಿತ್ಯಕ್ತ ಪ್ರದೇಶವಾಗಿ ಮಾಡಲು ಇಸ್ರೇಲ್ ಪ್ರಯತ್ನಿಸುತ್ತದೆ, ಇದು ವಿಲೀನ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ” ಎಂದು ಅಲ್-ಹುಸೇನಿ ಹೇಳಿದರು.

ಇತ್ತೀಚೆಗೆ, ಅಲ್-ಅಕ್ಸಾ ಮಸೀದಿಯಲ್ಲಿ ಇಸ್ರೇಲಿ ಪಡೆಗಳು ಮುಸ್ಲಿಮರ ಮೇಲೆ ಆಕ್ರಮಣ ಮಾಡಿತು. ಅವರಲ್ಲಿ ಹಲವರು ಗಾಯಗೊಂಡರು ಮತ್ತು ಇತರರನ್ನು ಬಂಧಿಸಲಾಗಿದೆ. ಇಸ್ರೇಲಿ ಪೋಲಿಸ್ ಅಲ್-ಆಕ್ಸಾದ ಅಲ್-ರಹಮಾ ದ್ವಾರವನ್ನು ಮುಚ್ಚಿದ ಇಸ್ರೇಲಿ ಪೋಲಿಸರು ಮರುದಿನದ ಫೆಲಸ್ತೀನಿಯರ ಪ್ರತಿಭಟನೆಗಳನ್ನು ಪ್ರಚೋದಿಸಿತು.

ಮುಸ್ಲಿಮರಿಗೆ, ಅಲ್-ಅಕ್ಸಾ ವಿಶ್ವದ ಮೂರನೆಯ ಪವಿತ್ರ ತಾಣವಾಗಿದೆ. ಇದನ್ನು ಯಹೂದಿಗಳು “ಟೆಂಪಲ್ ಮೌಂಟ್” ಎಂದು ಕರೆಯುತ್ತಾರೆ.

ಇಸ್ರೇಲ್ 1967 ರ ಮಧ್ಯಪ್ರಾಚ್ಯ ಯುದ್ಧದ ಸಮಯದಲ್ಲಿ ಪೂರ್ವ ಜೆರುಸಲೆಮ್ ಅನ್ನು ಆಕ್ರಮಿಸಿತು. ಸಂಪೂರ್ಣ ನಗರವನ್ನು 1980 ರಲ್ಲಿ ವಶಪಡಿಸಿಕೊಂಡು,ಇದನ್ನು ಅಂತರರಾಷ್ಟ್ರೀಯವಾಗಿ ಎಂದಿಗೂ ಗುರುತಿಸಲ್ಪಡದ ಯಹೂದಿ ರಾಜ್ಯದ ರಾಜಧಾನಿಯೆಂದು ಹೇಳಿಕೊಂಡಿದೆ.