ಢಾಕ ಫೆ.25: ವಿಮಾನ ಅಪಹರಣಕ್ಕೆ ಯತ್ನಿಸಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದ ಬಾಂಗ್ಲಾದೇಶಿ ಅಪಹರಣಕಾರ ಆಟಿಕೆ ಪಿಸ್ತೂಲು ಹೊಂದಿದ್ದ ಎಂದು ಪೊಲೀಸರು ಹೇಳಿದರು.
“ಆತನ ಬಳಿಯಿದ್ದುದು ಆಟಿಕೆ ಫಿಸ್ತೂಲು ಆಗಿತ್ತು. ಅವನು ದೇಹದಲ್ಲಿ ಬಾಂಬನ್ನು ಅಡಗಿಸಿಟ್ಟುಕೊಂಡಿರಲಿಲ್ಲ ಎಂದು ಚಿತ್ತಗಾಂಗ್ನ ಹೆಚ್ಚುವರಿ ಪೊಲೀಸ್ ಆಯುಕ್ತ ರಾದ ಕುಸುಮ್ ದೇವನ್ ತಿಳಿಸಿದರು.
“ಅಪಹರಣಕಾರ ಮಾನಸಿಕ ಅಸ್ವಸ್ಥನಾಗಿರುವಂತೆ ಕಂಡು ಬಂದಿದ್ದಾನೆ. ಆತ ತನ್ನ ಪತ್ನಿಯೊಂದಿಗೆ ಏನೊ ಸಮಸ್ಯೆ ಹೊಂದಿರುವನಂತೆ ಕಂಡುಬಂದಿದ್ದಾನೆ. ಆತ ಪ್ರಧಾನಿ ಬೇಗಂ ಹಸೀನಾರೊಂದಿಗೆ ಮಾತಾಡಬೇಕೆಂದು ಬೇಡಿಕೆ ಇಟ್ಟಿದ್ದ. ಆದರೆ ನಾವು ಈಗ ತನಿಖೆ ಮಾಡುತ್ತಿದ್ದೇವೆ. ತದನಂತರ ಒಂದು ನಿರ್ಧಾರಕ್ಕೆ ಬರಲು ಸಾಧ್ಯ” ಎಂದು ಅವರು ಹೇಳಿದರು.
ಬಾಂಗ್ಲಾದೇಶಿ ಕಮಾಂಡೊಗಳು ಅಪಹರಣಕಾರನನ್ನು ಕೊಂದು ಹಾಕಿದ್ದರು. ಅಪಹರಣಕಾರ ರವಿವಾರ ಬಿಮನ್ ಬಾಂಗ್ಲಾದೇಶಿ ಏರ್ಲೈನ್ಸ್ ವಿಮಾನದ ಕಾಕ್ಪಿಟ್ಗೆ ಪ್ರವೇಶಿಸಲು ಯತ್ನಿಸಿದ್ದಾನೆ. ಮತ್ತು ಫಿಸ್ತೂಲು ತೋರಿಸಿ, ವಿಮಾನವನ್ನು ಸ್ಫೋಟಿಸುವ ಬೆದರಿಕೆ ಹಾಕಿದ್ದಾನೆ. ತಕ್ಷಣ ಜಾಗೃತರಾದ ಭದ್ರತಾ ಕಮಾಂಡೊಗಳು ಗುಂಡು ಹಾರಿಸಿ ಆತನ್ನು ಕೊಂದು ಹಾಕಿದ್ದರು.












