ನಾಗಪುರ,ಎ.3: ಪತ್ನಿ ತೊರೆದು ಹೋದ ಕೋಪದಲ್ಲಿ ಇಬ್ಬರು ಹೆಣ್ಣುಮಕ್ಕಳನ್ನು ನೇಣು ಹಾಕಿ ಕೊಂದು ಫೋಟೊವನ್ನು ವಾಟ್ಸ್ಆಪ್ ಮೂಲಕ ಪತ್ನಿಗೆ ಕಳುಹಿಸಿದ ಬಳಿಕ ಕಾಲೇಜು ಅಧ್ಯಾಪಕರೊಬ್ಬರು ಆತ್ಮಹತ್ಯೆ ಮಾಡಿದ ಘಟನೆ ಮಹಾರಾಷ್ಟ್ರದ ನಾಗಪುರ ಸಮೀಪದ ಬಲ್ಲಾರ್ಪುರಿಯಲ್ಲಿ ನಡೆದಿದೆ. ಐಟಿಐ ಅಧ್ಯಾಪಕ ಋಷಿಕಾಂತ್ ಸಿ. ಕುಡಪ್ಪಳ್ಳಿ(4) ಈ ಕ್ರೂರ ಕೃತ್ಯವೆಸಗಿದ್ದಾರೆ. ಆರು ವರ್ಷದ ನಾರಾಯಣಿ, ಮತ್ತು ಒಂದೂವರೆ ವರ್ಷದ ಕಾರ್ತಿಕಿ ಎಂಬ ಇಬ್ಬರು ಮಕ್ಕಳನ್ನು ಆತ ನೇಣು ಹಾಕಿ ಕೊಂದು ಹಾಕಿದ್ದಾರೆ.
ಪತ್ನಿ ಬೇರೊಬ್ಬನೊಂದಿಗೆ ಓಡಿಹೋಗಿದ್ದಕ್ಕೆ ನೊಂದುಕೊಂಡಿದ್ದ ಋಷಿಕಾಂತ್ ಮಕ್ಕಳನ್ನು ಕೊಲೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಂಡರೆಂದು ವರದಿಗಳು ತಿಳಿಸಿವೆ. ಇಂದು ಬೆಳಗ್ಗಿನ ಜಾವ ಒಂದು ಗಂಟೆಗೆ ಋಷಿಕಾಂತ್ರ ಮನೆಯಲ್ಲಿ ಘಟನೆ ನಡೆದಿದೆ. ಕಾರು ಚಾಲಕನ ಜೊತೆ ಋಷಿಕಾಂತ್ರ ಪತ್ನಿ ಪ್ರಗತಿ ಓಡಿಹೋಗಿದ್ದಳು. ಈ ಘಟನೆಯ ನಂತರ ಋಷಿಕಾಂತ್ ಖಿನ್ನರಾಗಿದ್ದರು ಎಂದು ಋಷಿಕಾಂತ್ರ ಸಹೋದರ ಗೋಪಾಲ್ ಸಿ. ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.












