ಬೆಂಗಳೂರು ಉತ್ತರ ಲೋಕಸಭಾ ಸೀಟನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟ ಜೆಡಿಎಸ್

0
740

ಬೆಂಗಳೂರು,ಮಾ.25: ಬಹಳ ಕುತೂಹಲಕಾರಿ ವಿದ್ಯಾಮಾನವೊಂದರಲ್ಲಿ ಕೊನೆಗೂ ಬೆಂಗಳೂರು ಉತ್ತರ ಲೋಕಸಭಾಕ್ಷೇತ್ರವನ್ನು ಜೆಡಿಎಸ್ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದೆ. ಅಲ್ಲಿ ಸ್ಪರ್ಧಿಸಲು ಸೂಕ್ತ ಅಭ್ಯರ್ಥಿ ದೊರೆಯದ್ದು ಜೆಡಿಎಸ್‍ನ ನಿರ್ಧಾರಕ್ಕೆ ಕಾರಣ ಎನ್ನಲಾಗುತ್ತಿದೆ.

ಈ ಹಿಂದೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಜೆಡಿಎಸ್ ನಿಂದ ಸ್ಪರ್ಧಿಸುವಂತೆ ಮಾಡಲು ತೀರ್ಮಾನವಾಗಿತ್ತು.ಆದರೆ ಅದನ್ನು ಜಾರಿಗೆ ತರಲು ಸಾಧ್ಯವಾಗದ್ದರಿಂದ ಜೆಡಿಎಸ್ ಸ್ಪರ್ಧೆಯಿಂದ ಹಿಂದೆ ಸರಿದಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿಯಿರುವ ಕೆ.ಸಿ. ವೇಣುಗೋಪಾಲ್ ಈ ವಿವರವನ್ನು ಟ್ವಿಟರ್ ಮೂಲಕ ಬಹಿರಂಗಪಡಿಸಿದ್ದಾರೆ.

ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟದ್ದಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್‍ಗೆ ಕೃತಜ್ಞತೆಯನ್ನು ಅವರು ಸಲ್ಲಿಸಿದ್ದಾರೆ.ನಾವು ಒಟ್ಟುಗೂಡಿ ಪ್ರಜಾಪ್ರಭುತ್ವವನ್ನು ಮರಳಿ ತರೋಣ ಎಂದು ವೇಣುಗೋಪಾಲ್ ಟ್ವೀಟಿಸಿದ್ದಾರೆ. ಕಾಂಗ್ರೆಸ್ ಜೆಡಿಎಸ್ ಸಖ್ಯದಲ್ಲಿ 20 ಸೀಟು ಕಾಂಗ್ರೆಸ್ಸಿಗೂ ಎಂಟು ಸೀಟುಗಳು ಜೆಡಿಎಸ್‍ಗೂ ಹಂಚಿಕೆಯಾಗಿತ್ತು. ಈ ಹಿಂದೆ 12 ಸೀಟುಗಳನ್ನು ಜೆಡಿಎಸ್ ಕೇಳಿತ್ತು. ಅದರೆ ಎಂಟು ಸೀಟುಗಳು ಲಭಿಸಿದ್ದವು.

ಆದರೆ ಇದರಲ್ಲಿ ಐದು ಸೀಟುಗಳು ಜೆಡಿಎಸ್ ಪ್ರಭಾವ ಇಲ್ಲದ ಕ್ಷೇತ್ರಗಳಾಗಿವೆ. ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ಬೆಂಗಳೂರುಉತ್ತರಗಳಲ್ಲಿ ಜೆಡಿಎಸ್ ಪ್ರಭಾವಿಯೂ ಅಲ್ಲ ಮತ್ತು ಬಲಿಷ್ಠ ನಾಯಕರನ್ನೂ ಹೊಂದಿಲ್ಲ. ಈ ಮೂರು ಸೀಟುಗಳಿಗೆ ಜೆಡಿಎಸ್ ಕಾಂಗ್ರೆಸ್ ನಾಯಕರನ್ನೇ ಹುಡುಕುತ್ತಿತ್ತು. ಆದರೆ ಬೆಂಗಳೂರು ಉತ್ತರವನ್ನು ಕಾಂಗ್ರೆಸ್‍ಗೆ ಜೆಡಿಎಸ್ ಬಿಟ್ಟುಕೊಟ್ಟಿದೆ.