ಸುಲ್ತಾನಪುರ್ ಭಾಷಣದಲ್ಲಿ ಮುಸ್ಲಿಮರಿಗೆ ಬೆದರಿಕೆ: ಮೇನಕಾ ಗಾಂಧಿಗೆ ನೋಟಿಸು!

0
919

ಸುಲ್ತಾನ್‍ಪುರ,ಎ.13: ಉತ್ತರ ಪ್ರದೇಶದ ಸುಲ್ತಾನ್‍ಪುರದಲ್ಲಿ ಮತಯಾಚಿಸುವ ಸಂದರ್ಭದಲ್ಲಿ ಮುಸ್ಲಿಮರಿಗೆ ಬೆದರಿಕೆ ಹಾಕಿದ ಕೇಂದ್ರ ಸಚಿವ ಮೇನಕಾ ಗಾಂಧಿಗೆ ಜಿಲ್ಲಾಮ್ಯಾಜಿಸ್ಟ್ರೇಟ್ ಕಾರಣ ಕೇಳಿ ನೋಟಿಸು ಕಳುಹಿಸಿದ್ದಾರೆ. ತನಗೆ ವೋಟು ಹಾಕದಿದ್ದರೆ ಜನಪ್ರತಿನಿಧಿ ಎಂಬ ನೆಲೆಯಲ್ಲಿ ತನ್ನಿಂದ ಸಹಾಯ ಸಿಗಲಾರದು ಎಂದು ಮೇನಾಕಾ ಗಾಂಧಿ ಭಾಷಣ ಮಾಡಿದ್ದರು.

ಮೇನಕಾ ಗಾಂಧಿಯ ಹೇಳಿಕೆಯನ್ನು ಚುನಾವಣಾ ಆಯೋಗ ಗಮಿಸಿದ್ದು ಜಿಲ್ಲಾಮ್ಯಾಜಿಸ್ಟ್ರೇಟ್ ಘಟನೆಗೆ ಸಂಬಂಧಿಸಿ ನೋಟಿಸು ಜಾರಿಗೊಳಿಸಿದ್ದಾರೆ. ಜನರ ಪ್ರೀತಿ ವಿಶ್ವಾಸ- ಬೆಂಬಲ ಇರುವುದರಿಂದ ತಾನು ಇಲ್ಲಿ ನಿಂತರೂ ಗೆಲ್ಲುತ್ತೇನೆ. ಆದರೆ ಮುಸ್ಲಿಮರ ವೋಟು ಇಲ್ಲದೆ ಗೆದ್ದರೆ ಅದು ಒಳ್ಳೆಯ ವಿಷಯವಲ್ಲ. ಕೆಲವೊಮ್ಮೆ ಕೆಟ್ಟ ಅನುಭವವನ್ನು ಅವರು ಅನುಭವಿಸಬೇಕಾದೀತು.

ಯಾವುದಾದರೂ ಅಗತ್ಯದೊಂದಿಗೆ ನಂತರ ನನ್ನನ್ನು ಭೇಟಿಯಾದರೆ ಮುಸ್ಲಿಮರಿಗೆ ಸಹಾಯ ಮಾಡಬೇಕೆ ಎನ್ನುವ ಬಗ್ಗೆ  ಯೋಚಿಸಬೇಕಾಗುತ್ತದೆ. ಎಲ್ಲವೂ ಅತ್ತಿತ್ತ ಬೇಕಾಗಿದೆಯಲ್ಲವೇ? ನಾವು ಮಹಾತ್ಮ ಗಾಂಧಿಯ ಮಕ್ಕಳಲ್ಲವೇ. ನಿಮ್ಮ ವೋಟು ಇಲ್ಲದಿದ್ದರು ನಾನು ಗೆಲ್ಲಲಿದ್ದೇನೆ ಎಂದು ಮೇನಕಾ ಗಾಂಧಿ ಹೇಳಿದ್ದರು. ಸುಲ್ತಾನಪುರದ ತುರ್ಕ್‍ಬಾನಿ ಕ್ಷೇತ್ರದಲ್ಲಿ ಮೇನಕಾ ಗಾಂಧಿ ಭಾಷಣ ಮಾಡಿದ್ದರು.ಹಲವಾರು ಮುಸ್ಲಿಮರು ನೆರೆದಿದ್ದ ಸಭೆಯಲ್ಲಿ ಈ ರೀತಿ ಬೆದರಿಕೆ ಹಾಕಿದ್ದು ಈಗ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.