ಚೀನದ ಉಯಿಘರ್‌ರ‌ ಜನಾಂಗೀಯ ಹತ್ಯೆಯನ್ನು ಬೆಂಬಲಿಸಿದ 45 ದೇಶಗಳಲ್ಲಿ ಸರ್ವಾಧಿಕಾರಿ ಸರಕಾರವಿದೆ

0
473

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಅ.9: ಚೀನದ ಉಯಿಘರ್ ಜನಾಂಗೀಯ ಹತ್ಯೆಯನ್ನು 45 ದೇಶಗಳು ಬೆಂಬಲಿಸಿದ್ದು, ಈ ದೇಶಗಳಲ್ಲಿ ಸರ್ವಾಧಿಕಾರಿ ಸರಕಾರದ ಆಡಳಿತವಿದೆ ಎಂದು ಉಯಿಘರ್ ಅಮೆರಿಕನ್ ಮಾನವಹಕ್ಕು ಕಾರ್ಯಕರ್ತೆ ರುಷನ್ ಅಬ್ಬಾಸ್ ಹೇಳಿದ್ದಾರೆ.

ಚೀನದ ಮಿತ್ರ ದೇಶಗಳು, ಅಲ್ಲಿ ಸರ್ವಾಧಿಕಾರಿಗಳು ಆಳುತ್ತಿದ್ದಾರೆ ಎಂದು ಸಾಬೀತುಗೊಂಡಿದೆ ಎಂದು ವೀಡಿಯೊ ಸಂದೇಶದಲ್ಲಿ ರುಷನ್ ಬೆಟ್ಟು ಮಾಡಿದ್ದಾರೆ. ಆಧುನಿಕ ಕಾಲದಲ್ಲಿ ಕಾಲನಿ ಆಡಳಿತ ಕುರಿತು, ಮರಳುತ್ತಿರುವ ಗುಲಾಮತ್ವದ ಕುರಿತು ಮರು ಚಿಂತನೆ ನಡೆಸಿ ಎಂದು ಚೀನವನ್ನು ಬೆಂಬಲಿಸಿದ ಆಫ್ರಿಕನ್ ದೇಶಗಳ ನಾಯಕರೊಡನೆ ರುಷನ್ ಆಗ್ರಹಿಸಿದ್ದಾರೆ.

ಉಯಿಘರ್ ಅಲ್ಪಸಂಖ್ಯಾತರು, ಟಿಬೆಟ್ ಪ್ರಜೆಗಳು, ಮಂಗೋಲಿಯನ್ನರು ಹಾಕಾಂಗಿನ ಪ್ರಜೆಗಳ ಸಹಿತ ಹಲವು ವಿಷಯದಲ್ಲಿ ಚೀನ ಸುಳ್ಳಾಡುತ್ತಿದೆ. ಬೆಲ್ಟ್ ಆಂಡ್ ರೋಡ್ ಯೋಜನೆಯಲ್ಲಿ ಹೂಡಿಕೆ ಮಾಡುವುದು. ಅದನ್ನು ಬೆನ್ನು ಹಿಡಿದಿರುವುದು ಜಾಗತಿಕ ಪ್ರಾಬಲ್ಯಗಳಿಸುವ ಚೀನದ ತಂತ್ರಗಳೆಂದು ರುಷನ್ ಹೇಳಿದರು.

ಮುಸ್ಲಿಮರ ವಿರುದ್ಧ ಚೀನದ ಮಾನವಹಕ್ಕು ಉಲ್ಲಂಘನೆಯನ್ನು ಬೆಂಬಲಿಸಿದ ಇಸ್ಲಾಮೀ ದೇಶಗಳ ನಿಲುವನ್ನು ರುಷನ್ ಖಂಡಿಸಿದರು. ಚೀನ ಇಸ್ಲಾಮಿನ ವಿರುದ್ಧ ಯುದ್ಧ ಮಾಡುತ್ತಿದೆ ಎಂಬ ನಮ್ಮ ಮುನ್ನೆಚ್ಚರಿಕೆಗಳನ್ನು ನೆನಪಿಟ್ಟುಕೊಳ್ಳಿರಿ. ಚೀನ ನಿಮ್ಮ ಪ್ರತಿಯೊಂದು ದೇಶವನ್ನೂ ಕಾಲನಿಯಾಗಿ ಮಾಡಲಿದೆ. ಪಶ್ಚಿಮದಲ್ಲಿ ವಸಾಹುತುಶಾಹೀಕರಣಕ್ಕೆ ಚೀನ ಪ್ರಯತ್ನಿಸುತ್ತಿದೆ ಎಂದು ರುಷನ್ ಅಬ್ಬಾಸ್ ಹೇಳಿದರು.