ಲಾವ್ಲಿನ್ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಬಲವಾದ ಸಾಕ್ಷ್ಯ ಒದಗಿಸಿ- ಸಿಬಿಐಗೆ ಸುಪ್ರೀಂ ಕೋರ್ಟ್ ಮುನ್ನೆಚ್ಚರಿಕೆ

0
374

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.9: ಎಸ್‍ಎನ್‍ಸಿ ಲಾವ್ಲಿನ್ ಪ್ರಕಣದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಂತಾದವರನ್ನು ಆರೋಪಿ ಪಟ್ಟಿಯಿಂದ ತೆರವುಗೊಳಿಸಿದ ಹೈ ಕೋರ್ಟು ತೀರ್ಪಿನಲ್ಲಿ ಮಧ್ಯಪ್ರವೇಶಿಸಬೇಕಾದರೆ ಬಲವಾದ ಸಾಕ್ಷ್ಯಗಳನ್ನು ತರಬೇಕು ಎಂದು ಸಿಬಿಐಗೆ ಸುಪ್ರೀಂಕೋರ್ಟು ತಾಕೀತು ಮಾಡಿದೆ.

ಎರಡು ಕೋರ್ಟುಗಳು ಆರೋಪ ಮುಕ್ತಗೊಳಿಸಿದ ಕೇಸು ಇದು. ನಮ್ಮ ಮಧ್ಯಪ್ರವೇಶ ಆಗಬೇಕಿದ್ದರೆ ಬಲವಾದ ಸಾಕ್ಷ್ಯಗಳು ಬೇಕು ಎಂದು ಗುರುವಾರ ಕೇಸಿನ ವಿಚಾರಣೆಯಲ್ಲಿ ಜಸ್ಟಿಸಿ ಯು.ಯು ಲಲಿತ್ ಅಧ್ಯಕ್ಷತೆಯ ಪೀಠ ಸಿಬಿಐಗೆ ಮುನ್ನೆಚ್ಚರಿಕೆ ನೀಡಿತು.

ವಿವರವಾದ ಪಟ್ಟಿಗಳ ಸಹಿತ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ದಾಖಲೆಗಳನ್ನು ಹಾಜರುಪಡಿಸಲಿಕ್ಕಿದೆ ಎಂದು ಪ್ರಕರಣ ಪರಿಗಣಿಸಿ ವಿಚಾರಣೆ ಆರಂಭಿಸಿದಾಗ ಸಿಬಿಐ ಕೋರ್ಟಿಗೆ ತಿಳಿಸಿತ್ತು. ಈಗ ಅಗತ್ಯ ದಾಖಲೆಗಳನ್ನು ಪರಿಶೀಲಿಸಿಲ್ಲವೇ ಎಂದು ಸಿಬಿಐಯನ್ನು ಕೇಳಿದ ಕೋರ್ಟು ವಿವರವಾದ ನೋಟ್ ಹಾಜರು ಪಡಿಸಲು ಒಂದು ವಾರದ ಸಮಯ ಅವಕಾಶ ನೀಡಿತು. ಸಿಬಿಐಯ ವಾದಗಳಿಗೆ ಉತ್ತರ ನೀಡಬಹುದು ಎಂದು ಪಿಣರಾಯಿ ವಿಜಯನ್‍ರಿಗಾಗಿ ಹಾಜರಾದ ಹಿರಿಯ ವಕೀಲ ಹರೀಶ್ ಸಾಳ್ವೆ ತಿಳಿಸಿದರು.

ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಏಳನೆ ಆರೋಪಿ. ಮಾಜಿ ಇಂಧನ ಕಾರ್ಯದರ್ಶಿ ಕೆ.ಮೋಹನ ಚಂದ್ರನ್ ಪ್ರಥಮ ಆರೋಪಿಯಾಗಿದ್ದಾರೆ. ಮಾಜಿ ಜಂಟಿ ಕಾರ್ಯದರ್ಶಿ ಎ.ಫ್ರಾನ್ಸಿಸ್ ಎಂಟನೇ ಆರೋಪಿಯಾಗಿದ್ದು ಇವರ ವಿರುದ್ಧ ಆರೋಪವನ್ನು ಕೇರಳ ಹೈಕೋರ್ಟು ರದ್ದುಪಡಿಸಿತ್ತು. ಇದರ ವಿರುದ್ಧ ಸಿಬಿಐ ಮತ್ತು ಕಸ್ತೂರಿ ರಂಗ ಅಯ್ಯರ್ ಮುಂತಾದ ಅಧಿಕಾರಿಗಳು ಸಲ್ಲಿಸಿದ ಅರ್ಜಿಗಳು ಸುಪ್ರೀಂ ಕೋರ್ಟಿನಲ್ಲಿವೆ.