ಹೊಸದಿಲ್ಲಿ,ಮಾ.30: ಶತ್ರುಘ್ನ ಸಿನ್ಹಾರ ಮಗಳು ಮತ್ತು ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ತನ್ನ ತಂದೆ ಬಹಳ ಹಿಂದೆಯೇ ಬಿಜೆಪಿಯಿಂದ ಹೊರಬರಬೇಕಿತ್ತು ಎಂದು ಹೇಳಿದ್ದಾರೆ. ಬಿಜೆಪಿಯಲ್ಲಿ ಅವರಿಗೆ ಸೂಕ್ತ ಗೌರವ ಸ್ಥಾನಮಾನ ಸಿಕ್ಕಿಲ್ಲ. ಶತ್ರುಘ್ನ ಸಿನ್ಹಾ ಕಾಂಗ್ರೆಸ್‍ಗೆ ಸೇರ್ಪಡೆಯಾಗುವ ಕುರಿತು ವರದಿಯಾದ ನಂತರ ಸೋನಾಕ್ಷಿ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯ ಹಾಲಿ ಸಂಸದರಾಗಿರುವ ಶತ್ರುಘ್ನ ಸಿನ್ಹಾ ಬಿಜೆಪಿಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದಾರೆ. ತಾನು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಎಪ್ರಿಲ್ ಆರರಂದು ಸಿನ್ಹಾ ಕಾಂಗ್ರೆಸ್‍ಗೆ ಪಾದಾರ್ಪಣೆ ಮಾಡಲಿದ್ದಾರೆ.
ಬಿಜೆಪಿಯ ಅಭ್ಯರ್ಥಿಯಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಪಾಟ್ನಾ ಸಾಹಿಬ್ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಕಾಂಗ್ರೆಸ್ ಟಿಕೆಟ್‍ನಲ್ಲಿ ಪಾಟ್ನಾ ಸಾಹಿಬ್ ಸೀಟ್‍ನಿಂದ ಶತ್ರುಘ್ನ ಸಿನ್ಹಾ ಈಸಲ ಸ್ಪರ್ಧಿಸಲಿದ್ದಾರೆ.












