ದಾಖಲೆಗಳಿಲ್ಲದ 10 ಕೋಟಿ ರೂ. ವಶ : ಅತ್ಯಾಚಾರ ಆರೋಪಿ ಬಿಷಪ್ ಫ್ರಾಂಕೊರ ಸಹಾಯಕ ಪಾದ್ರಿಯ ಬಂಧನ

0
643

ಜಲಂಧರ್,ಮಾ. 30: ದಾಖಲೆಗಳಿಲ್ಲದ ಹತ್ತು ಕೋಟಿ ರೂಪಾಯಿಯೊಂದಿಗೆ ಬಿಷಪ್ ಫ್ರಾಂಕೊ ಮುಳಗಲ್‍ರ ಸಹಾಯಕ ಪಾದ್ರಿಯೊಬ್ಬರನ್ನು ಎಂಫೋರ್ಸ್ ಮೆಂಟ್ ಡೈರಕ್ಟರೇಟ್ ಬಂಧಿಸಿದೆ. ನವಜೀವನ ಚಾರಿಟೇಬಲ್ ಸೊಸೈಟಿ ನಿರ್ದೇಶಕ ಫಾದರ್ ಆಂಟನಿ ಮಾಡಶ್ಶೇರಿ ಮತ್ತು ಇವರ ಜೊತೆಗಿದ್ದ ಇತರ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಜಲಂಧರ್ ಪ್ರತಾಪ ಪುರದ ಮನೆಯಲ್ಲಿ ತಪಾಸಣೆ ನಡೆಸಿದಾಗ ಅನಧಿಕೃತ ಹಣ ಕಂಡು ಬಂತು. ಪಂಜಾಬ್ ಲುಧಿಯಾನ ಜಿಲ್ಲೆಯ ಖಾನಾ ಪೊಲೀಸರು ತಪಾಸಣೆಯ ವೇಳೆ ಎಂಪೋರ್ಸ್‍ಮೆಂಟ್

ಡೈರಕ್ಟರೇಟ್ ಅಧಿಕಾರಿಗಳು ದಾಳಿ ನಡೆಸಿದ ವೇಳೆ ನೆರವಾಗಿದ್ದಾರೆ. ಪರವಾನಿಗೆ ಇರುವ ಬಂಧೂಕನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.

ಜಲಂಧರ್‍ನಲ್ಲಿ ಪಾದ್ರಿಯಾಗಿರುವ ಆಂಟನಿ ಅವರು ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣದ ಆರೋಪಿ ಬಿಷಪ್ ಫ್ರಾಂಕೊ ಮುಳಗಲ್‍ರ ನಿಕಟ ಸಹಾಯಕರಲ್ಲಿ ಒಬ್ಬರು ಎಂದು ವರದಿ ತಿಳಿಸಿದೆ.