ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಮಾ. 5: ಐದು ವರ್ಷಗಳಲ್ಲಿ ವಿದೇಶ ಯಾತ್ರೆಗೆ ಪ್ರಧಾನಿ ನರೇಂದ್ರ ಮೋದಿ 446.52 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಲೋಕಸಭೆಯಲ್ಲಿ ಕೇಳಿದ ಪ್ರಶ್ನೆಗೆ ವಿದೇಶ ಸಹಸಚಿವ ವಿ. ಮುರಳೀಧರನ್ ವಿಮಾನಯಾನಗಳ ಸಹಿತ ವಿದೇಶ ಪ್ರವಾಸದ ಕುರಿತ ಖರ್ಚು ವೆಚ್ಚವನ್ನು ಬಹಿರಂಗಪಡಿಸಿದ್ದಾರೆ.
2015-16ರಲ್ಲಿ 121.85 ಕೋಟಿ ರೂಪಾಯಿ ವಿದೇಶ ಪ್ರಯಾಣಕ್ಕೆ ಮೋದಿ ವ್ಯಯಿಸಿದರು. 2016-17ರಲ್ಲಿ 78.52 ಕೋಟಿ ರೂಪಾಯಿ ಬಳಸಿದರು. 2017-18ರಲ್ಲಿ 99.90 ಕೋಟಿ ರೂಪಾಯಿ ಮತ್ತು 2019-19ರಲ್ಲಿ 100.2, 2019-20ರಲ್ಲಿ 46.23 ಕೋಟಿ ರೂಪಾಯಿ ವಿದೇಶ ಪ್ರಯಾಣಕ್ಕೆ ಪ್ರಧಾನಿ ಬಳಸಿದರೆಂದು ಲೆಕ್ಕವನ್ನು ಲೋಕಸಭೆಯಲ್ಲಿ ತಿಳಿಸಲಾಗಿದೆ.












