ಗೋವಾದಲ್ಲಿ ರಾಜ್ಯಪಾಲರನ್ನು ಭೇಟಿಯಾದ ಕಾಂಗ್ರೆಸ್; ಪ್ರಮೋದ್ ಸಾವಂತ್ ಮುಖ್ಯಮಂತ್ರಿ ಸಾಧ್ಯತೆ!

0
1642

ಪಣಜಿ, ಮಾ.18: ದಿವಂಗತ ಗೋವಮುಖ್ಯಮಂತ್ರಿ ಮನೋಹರ ಪಾರಿಕ್ಕರ್ ಉತ್ತರಾಧಿಕಾರಿಯಾಗಿ ಬಿಜೆಪಿ ಪ್ರಮೋದ್ ಸಾವಂತ್‍ರನ್ನು ಆಯ್ಕೆ ಮಾಡಲಿದೆ ಎಂದು ವರದಿಗಳು ತಿಳಿಸಿವೆ. ಅತಿದೊಡ್ಡ ಪಕ್ಷವಾದ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿಯಾಗಿ ಸರಕಾರ ರಚಿಸುವ ಹಕ್ಕು ಮಂಡಿಸಿದ್ದು ಈ ಹಿನ್ನೆಲೆಯಲ್ಲಿ ಇಂದು ಸಂಜೆಯೇ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಪಾರಿಕ್ಕರ್‍ರ ಸಾವಿನ ಸುದ್ದಿ ತಿಳಿದಂತೆ ಗೋವಾಕ್ಕೆ ಬಂದ ಕೇಂದ್ರ ಸಚಿವ ನಿತಿನ್ ಗಡ್ಕರಿ ರಾತ್ರೆಯಿಡೀ ಮಿತ್ರ ಪಕ್ಷಗಳೊಂದಿಗೆ ಸಮಾಲೋಚನೆ ನಡೆಸಿದ್ದು ವಿಶ್ವಜಿತ್ ರಾಣೆ ಮತ್ತು ಪ್ರಮೋದ್ ಸಾವಂತ್‍ರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಶಾಸಕರು ಸೂಚಿಸಿದ್ದಾರೆ.

ಪಾರಿಕ್ಕರ್ ನಿಧನದೊಂದಿಗೆ ಗೋವದಲ್ಲಿ ಬಿಜೆಪಿ ಸಖ್ಯ ಕೊನೆಗೊಂಡಿದ್ದು ಸರಕಾರ ರಚಿಸಲು ತಮಗೆ ಅವಕಾಶ ನೀಡಬೇಕೆಂದು ವಿಧಾನಸಭೆಯಲ್ಲಿ ಹೆಚ್ಚು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ರಾಜ್ಯಪಾಲರನ್ನು ಭೇಟಿಯಾಗಿ ಚರ್ಚಿಸಿದೆ. ಇಬ್ಬರು ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ನಲ್ವತ್ತು ಸದಸ್ಯರ ವಿಧಾನಸಭೆಯ ಸಂಖ್ಯಾ ಬಲ 37ಕ್ಕೆ ಕುಸಿದಿದೆ. ಇದರಲ್ಲಿ ಕಾಂಗ್ರೆಸ್ 14 ಶಾಸಕರು ಮತ್ತು ಬಿಜೆಪಿ 13 ಶಾಸಕರನ್ನು ಹೊಂದಿದೆ. ಕೇವಲ ಬಹುಮತ ಇಲ್ಲದಿದ್ದರೂ ಸಣ್ಣ ಪಾರ್ಟಿಗಳನ್ನು ಒಗ್ಗೂಡಿಸಿ ಮನೋಹರ್ ಪಾರಿಕ್ಕರ್ ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದರು.