ಭಾರತದಲ್ಲಿ ವಾಯು ಮಾಲಿನ್ಯದಿಂದ 12 ಲಕ್ಷ ಮಂದಿಯ ಅಕಾಲಿಕ ಮೃತ್ಯು!

0
2045

ಹೊಸದಿಲ್ಲಿ,ಎ.3: ಭಾರತದಲ್ಲಿ ಕಳೆದ ವರ್ಷ 12 ಲಕ್ಷ ಮಂದಿ ವಾಯು ಮಾಲಿನ್ಯದಿಂದ ಮೃತಪಟ್ಟಿದ್ದಾರೆ. ವಾಯುಮಾಲಿನ್ಯದ ಕುರಿತ ಜಾಗತಿಕ ವರದಿಯಾದ ಸ್ಟೇಟ್ ಆಫ್ ಗ್ಲೋಬರ್ 2019 ಈ ವಿವರವನ್ನು ಬಹಿರಂಗಪಡಿಸಿದೆ. ಹೆಚ್ಚು ಕಾಲ ಮನೆಯಿಂದ ಹೊರಗೆ ಇರುವ ಮತ್ತು ಮನೆಯಲ್ಲಿನ ವಾಯು ಮಾಲಿನ್ಯದಿಂದಾಗಿ 2017ರಲ್ಲಿ ಸ್ಟ್ರೋಕ್, ಮಧುಮೇಹ, ಹೃದಯಾಘಾತ, ಶ್ವಾಸಕೋಶ ಕ್ಯಾನ್ಸರ್ ಇತ್ಯಾದಿ ರೋಗಗಳಿಂದ ಜಗತ್ತಿನ್ಲಲಿ 50 ಲಕ್ಷ ಮಂದಿ ಮೃತಪಟ್ಟಿದ್ದಾರೆ.

ವರದಿಯ ಪ್ರಕಾರ ವಾಯು ಮಾಲಿನ್ಯದಿಂದ ಹೆಚ್ಚು ಸಾವುಗಳು ಭಾರತ ಮತ್ತು ಚೀನಗಳಲ್ಲಿ ನಡೆದಿವೆ. 2017ರಲ್ಲಿ ಈ ಎರಡು ದೇಶಗಳ್ಲಿ ತಲಾ ಹನ್ನೆರಡು ಲಕ್ಷ ಮಂದಿ ಸಾವನ್ನಪ್ಪಿದ್ದಾರೆ. ಅಮೆರಿಕದ ಹೆಲ್ತ್ ಇಂಪೆಕ್ಟ್ಸ್ ಇನ್ಸಿಟಿಟ್ಯೂಟ್ ವರದಿಯನ್ನು ಪ್ರಕಟಿಸಿದ್ದು ಭಾರತದಲ್ಲಿ ನಡೆಯುವ ಸಾವುಗಳ ಆರೋಗ್ಯಕ್ಕೆ ಸಂಬಂಧಿಸಿದ ಕಾರಣಗಳಲ್ಲಿ ವಾಯುಮಾಲಿನ್ಯ ಮೂರನೆ ಬಹುದೊಡ್ಡ ಕಾರಣವಾಗಿದೆ ಎನ್ನಲಾಗಿದ್ದು ಧೂಮಪಾನ ಕೂಡ ಜನರ ಸಾವು ಸಂಭವಿಸುವ ಇನ್ನೊಂದು ಕಾರಣವಾಗಿದೆಯೆಂದು ವರದಿ ತಿಳಿಸಿದೆ.

ವಾಯುಮಾಲಿನ್ಯ ತಡೆಯಲು ಆರಂಭಿಸಿದ ಪ್ರಧಾನಿ ಉಜ್ವಲ ಯೋಜನೆ, ಗೃಹ ಎಲ್‍ಪಿಜಿ ಕಾರ್ಯಕ್ರಮ, ಸ್ವಚ್ಛವಾಹನ ಮತ್ತು ಹೊಸ ರಾಷ್ಟ್ರೀಯ ಸ್ವಚ್ಛತಾ ವಾಯು ಕಾರ್ಯಕ್ರಮಗಳು ಜನರ ಸ್ವಾಸ್ಥ್ಯಕ್ಕೆ ಉಪಯುಕ್ತವಾಗಲಿದೆ ಎಂದು ತಿಳಿಸಿದೆ.