ತೃಶೂರ್,ಎ.4: ಭಗ್ನಪ್ರೇಮಿಯೊಬ್ಬ ತನ್ನನ್ನು ಪ್ರೀತಿಸಲು ನಿರಾಕರಿಸಿದ ಯುವತಿಗೆ ಬೆಂಕಿಹಚ್ಚಿ ಜೀವಂತ ಸುಟ್ಟುಹಾಕಿದ್ದಾನೆ. ಚಿಯ್ಯಾರಂ ಪೋಸ್ಟ್ ಆಫಿಸ್ ಬಳಿ ವಾಸವಿರುವ(22) ನೀತು ಅನ್ಯಾಯವಾಗಿ ಮೃತಳಾದ ನತದೃಷ್ಟ ಯುವತಿಯಾಗಿದ್ದು ಘಟನೆಯಲ್ಲಿ ವಡಕ್ಕೇಕ್ಕಾಡ್ ಎಂಬಲ್ಲಿನ ಯುವಕನನ್ನು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರೇಮ ನಿವೇದನೆಯನ್ನು ನಿರಾಕರಿಸಿದ್ದು ಘಟನೆ ಕಾರಣ ಎಂದು ಪೊಲೀಸರು ಹೇಳಿದರು. ಯುವತಿಯ ಮನೆಗೆ ನುಗ್ಗಿದ ಯುವಕನಿಗೂ ಯುವತಿಗೂ ಮಾತಿನ ಚಕಮಕಿ ನಡೆದಿದೆ. ನಂತರ ಕೋಪದ ಭರದಲ್ಲಿ ತನ್ನ ಬಳಿಯಿದ್ದ ಪೆಟ್ರೋಲನ್ನು ಯುವತಿಗೆ ಸುರಿದು ಯುವಕ ಬೆಂಕಿ ಹಚ್ಚಿದನು. ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಊರವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನೀತು ಬಿ.ಟೆಕ್ ವಿದ್ಯಾರ್ಥಿನಿಯಾಗಿದ್ದಾರೆ.












