ಹೊಸದಿಲ್ಲಿ,ಎ.16: ಪ್ರತಿ ಐದು ವರ್ಷಕ್ಕೊಮ್ಮೆ ಸರಕಾರಗಳು ಬದಲಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಸಾಮಾಜಿಕ ಸಂಘಟನೆಗಳು ಸರಕಾರವನ್ನು ಆಶ್ರಯಿಸಬಾರದೆಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದರು. ಸಂಸ್ಕೃತ ಪಂಡಿತ ಮಹಾಮಹೋಪಾಧ್ಯಾಯ ವಾಸುದೇವ್ ವಿಷ್ಣು ಮಿರಾಝಿಯವರ 125ನೆ ಜನ್ಮದಿನ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ಸಾಮಾಜಿಕ-ಸಂಶೋಧನಾ ಸಂಘಟನೆಗಳು ಶಕ್ತ ಮತ್ತು ಸ್ಥಿರವಾದ ಸಹಾಯಕನನ್ನು ಕಂಡು ಹುಡುಕಿ ಸಮಾಜದ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕೆಂದು ಭಾಗವತ್ರು ಹೇಳಿದರು. ಸರಕಾರದೊಂದಿಗೆ ಮಾತಾಡುವುದಿದ್ದರೆ ಮಾತಾಡಿ. ಆದರೆ ಸಂಘಟನೆಗಳು ಸರಕಾರಗಳನ್ನು ಆಶ್ರಯಿಸಬಾರದು ಎನ್ನುವುದು ನನ್ನ ಅಭಿಪ್ರಾಯ. ಸರಕಾರಗಳು ಬದಲಾಗುತ್ತಿರುತ್ತವೆ. ಹಿಂದೆ ರಾಜರ ಆಳ್ವಿಕೆಯಿದ್ದಾಗ 30-35 ವರ್ಷಗಳ ನಂತರ ಆಡಳಿತದಲ್ಲಿ ಬದಲಾಣೆಆಗುತ್ತಿತ್ತು. ಈಗ ಪ್ರತೀ ಐದು ವರ್ಷಕ್ಕೊಮ್ಮೆ ಸರಕಾರಗಳು ಬದಲಾಗುವ ಸಾಧ್ಯತೆಗಳಿವೆ. ಸರಕಾರದಲ್ಲಿ ವಿಶ್ವಾಸವಿಲ್ಲದಿದ್ದರೂ ನೀವು ಅದನ್ನು ಉಪಯೋಗಿಸಿಕೊಳ್ಳಿ ಎಂದು ಭಾಗವತ್ ಸಲಹೆ ನೀಡಿದರು. ವಿವಿಧ ಆಶಯಗಳಿಗಾಗಿ ವಿಜ್ಞಾನ ರೂಪುಗೊಳ್ಳುತ್ತದೆ. ಜ್ಞಾನ ಗಳಿಕೆ ಸ್ವಂತಕ್ಕಾಗಿ ಅಥವಾ ಸಮಾಜಕ್ಕೆ ಉಪಕಾರ ಮಾಡಲು ಆಗಬಹುದು. ಅನಶ್ವರತೆಯೆಡೆಗಿನ ದಾರಿ ಅರಿವು ಆಗಿದೆ ಎಂದು ಭಾಗವತ್ ಹೇಳಿದರು.












