ಕೇರಳ: ಬಿಜೆಪಿಯ ದಾಳಿಗೆ ಪ್ರೀತಿಯ ಭಾಷೆಯಲ್ಲಿ ಉತ್ತರ ನೀಡುವೆ- ರಾಹುಲ್ ಗಾಂಧಿ

0
1251

ಕೊಲ್ಲಂ,ಎ.16: ದೇಶ ಬಿಜೆಪಿ, ಆರೆಸ್ಸೆಸ್‍ನಿಂದ ದಾಳಿಗೊಳಗಾಗುತ್ತಿರುವ ಕಾಲವಿದರು, ಬಿಜೆಪಿ, ಆರೆಸ್ಸೆಸ್ ಅವರದಲ್ಲದ ಧ್ವನಿಯನ್ನು ದಮನಿಸಲು ಶ್ರಮಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು. ಬಿಜೆಪಿಗೆ ಅವರು ಪ್ರತಿನಿಧಿಸುವ ಆಶಯದಲ್ಲಿ ಮಾತ್ರ ವಿಶ್ವಾಸಿವೆ. ಅವರು ಮಾತ್ರ ಭಾರತದಲ್ಲಿ ಆಳ್ವಿಕೆ ನಡೆಸಬೇಕೆಂದು ಬಯಸುತ್ತಾರೆ. ಆದರೆ ಜನರ ಆಡಳಿತ ಭಾರತದಲ್ಲಿರಬೇಕೆಂದು ಕಾಂಗ್ರೆಸ್ ಬಯಸುತ್ತಿದೆ ಎಂದು ರಾಹುಲ್ ಗಾಂಧಿ ಹೇಳಿದರು. ಪತ್ತನಾಪುರಂನಲ್ಲಿ ಕೊಲ್ಲಂ ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಎನ್‍ಕೆ ಪ್ರೇಮ ಚಂದ್ರನ್ ಮತ್ತು ಮಾವೇಲಿಕ್ಕರ ಲೋಕಸಭಾ ಕ್ಷೇತ್ರದ ಯುಡಿಎಫ್ ಅಭ್ಯರ್ಥಿ ಕೊಡಿಕುನ್ನಿಲ್ ಸುರೇಶ್‍ರ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿ ಅವರು ಮಾತಾಡುತ್ತಿದ್ದರು.

ತಮ್ಮ ಆಶಯವನ್ನು ಬೆಂಬಲಿಸದವರನ್ನು ನಾಶಪಡಿಸುತ್ತೇವೆ ಎಂದು ಬಿಜೆಪಿ, ಆರೆಸ್ಸೆಸ್ ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಹೇಳುತ್ತಿರುವಂತೆ ಕಾಂಗ್ರೆಸ್ ಮುಕ್ತ ದೇಶ ಅವರ ಯೋಚನೆಯಾಗಿದೆ. ಕಾಂಗ್ರೆಸ್ ಎಂಬ ಆಶಯವನ್ನು ದೇಶದಿಂದ ಹೊರದಬ್ಬಬೇಕೆಂದು ಪ್ರಧಾನಿ ಹೇಳುತ್ತಿದ್ದಾರೆ. ಕಾಂಗ್ರೆಸ್ ಮೋದಿಯೊಂದಿಗೆ ಹೋರಾಡಲಿದೆ. ಮತ್ತು ಅವರ ಚಿಂತನಾಗತಿ ತಪ್ಪೆಂದು ಮನವರಿಕೆ ಮಾಡಿಕೊಡಲಿದೆ. ನಾವು ಮೋದಿಯನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ. ಆದರೆ ಎಂದೂ ಅಕ್ರಮವೆಸಗುವುದಿಲ್ಲ. ಬಿಜೆಪಿಯ ದಾಳಿಗೆ ಪ್ರೀತಿಯ ಭಾಷೆಯಲ್ಲಿ ಉತ್ತರಿಸುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು. ಭಾರತದ ಜನರು ಶಾಂತಿ ಸೌಹಾರ್ದದಿಂದ ಬದುಕಲು ಬಯಸುತ್ತಾರೆ. ಇದಕ್ಕೆ ಉತ್ಕೃಷ್ಟ ಉದಾಹರಣೆ ಕೇರಳವಾಗಿದೆ. ಆದ್ದರಿಂದಲೇ ತಾನು ಕೇರಳದಿಂದ ಸ್ಪರ್ಧಿಸುತ್ತಿದ್ದೇನೆ ಎಂದು ರಾಹುಲ್ ಗಾಂಧಿ ಹೇಳಿದರು. ಬಿಜೆಪಿ ನಾಯಕರು ವಿದೇಶಿ ರಾಷ್ಟ್ರಗಳನ್ನು ತೋರಿಸಿ ಮಾತಾಡುತ್ತಾರೆ ಎಂದು ರಾಹುಲ್ ಆರೋಪಿಸಿದರು.