ಲಕ್ನೊ,ಎ.16: ವಿವಾದ ಹೇಳಿಕೆ ನೀಡಿದ್ದಕ್ಕಾಗಿ ಚುನಾವಣಾ ಪ್ರಚಾರ ಮಾಡದಂತೆ ಚುನಾವಣಾ ಆಯೋಗದಿಂದ ನಿಷೇಧಕ್ಕೊಳಗಾದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಾರ್ಥನೆಯ ಮೊರೆ ಹೋಗಿದ್ದಾರೆ. ಪ್ರಸಿದ್ಧ ಲಕ್ನೊದ ಹನುಮಾನ್ ಸೇತು ಮಂದಿರಕ್ಕೆ ಯೋಗಿ ಬಂದರು. ಸುಮಾರು 25 ನಿಮಿಷ ಮಂದಿರದಲ್ಲಿ ಪ್ರಾರ್ಥಿಸಿದರು. ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಪೂರ್ವ ಉತ್ತರ ಪ್ರದೇಶದ ಗೊರಕ್ನಾರ್ಥ ಮಂದಿರದ ಪ್ರಧಾನ ಅರ್ಚಕರಾದ ಆದಿತ್ಯನಾಥ್ಗೆ 72 ಗಂಟೆಗಳ ನಿಷೇಧವನ್ನು ಚುನಾವಣಾ ಆಯೋಗ ಹೇರಿದೆ.
ನಿನ್ನೆ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ಪಿ ಅಧ್ಯಕ್ಷೆ ಮಾಯಾವತಿಗೆ ಚುನಾವಣಾ ಪ್ರಚಾರ ನಡೆಸದಂತೆ ಚುನಾವಣಾ ಆಯೋಗ ನಿಷೇಧ ಹೇರಿದೆ. ದ್ವೇಷ ಪೂರಿತ ಭಾಷಣ ಮಾಡಿದ್ದಕ್ಕಾಗಿ ಆಯೋಗ ನಿಷೇಧ ವಿಧಿಸಿದೆ. ಯೋಗಿಗೆ ಮೂರು ದಿವಸಗಳು ಮತ್ತು ಮಾಯಾವತಿಗೆ ಎರಡು ದಿವಸಗಳ ನಿಷೇಧ ಹೇರಲಾಗಿದೆ. ಬಜರಂಗದಳದ ಕುರಿತ ಯೋಗಿಯ ಭಾಷಣವನ್ನು ಟೀಕಿಸಿ ಮಾಯಾವತಿ ಹೇಳಿಕೆ ನೀಡಿದ್ದರು. ಅಲಿ-ಬಜ್ರಂಬ್ಬಲಿ ಎನ್ನುವ ಯೋಗಿಯ ಹೇಳಿಕೆಯನ್ನು ವ್ಯಂಗ್ಯವಾಡಿದ್ದ ಮಾಯಾವತಿ ಅಲಿ ಮತ್ತು ಬಜ್ರಂಗಬಲಿ ನಮ್ಮವರೇ ಎಂದು ಹೇಳಿದ್ದರು.












