6೦೦ ಮದ್ರಸಗಳನ್ನು ಮುಚ್ಚಿರುವೆ, ಇನ್ನೂ 3೦೦ ಮುಚ್ಚುವೆ: ಅಸ್ಸಾಮ್ ಮುಖ್ಯಮಂತ್ರಿ

0
245

ಸನ್ಮಾರ್ಗ ವಾರ್ತೆ

ನಾನು ಮುಖ್ಯಮಂತ್ರಿಯಾದ ಬಳಿಕ ಈವರೆಗೆ 600 ಮದರಸಗಳನ್ನು ಮುಚ್ಚಿದ್ದೇನೆ ಮತ್ತು ಇನ್ನೂ 300ರಷ್ಟು ಮಸೀದಿಗಳನ್ನು ಮುಚ್ಚುವೆ ಎಂದು ಅಸ್ಸಾಂನ ಮುಖ್ಯಮಂತ್ರಿ, ಹಿಮಂತ್ ಬಿಸ್ವ ಶರ್ಮ ಹೇಳಿದ್ದಾರೆ. ಕರೀಂ ನಗರದಲ್ಲಿ ನಡೆದ ಸಭೆಯೊಂದರಲ್ಲಿ ಮಾತಾಡುತ್ತಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.

ನಾವು ಅಸ್ಸಾಂನಲ್ಲಿ ಲವ್ ಜಿಹಾದ್ ತಡೆಯಲು ಪ್ರಯತ್ನಿಸುತ್ತಿದ್ದೇವೆ. ಅಲ್ಲದೆ ರಾಜ್ಯದ ಮದರಸಗಳನ್ನು ಮುಚ್ಚುವುದಕ್ಕೂ ಕಾರ್ಯಪ್ರವೃತ್ತರಾಗಿದ್ದೇವೆ. ನಾನು ಮುಖ್ಯಮಂತ್ರಿಯಾದ ಬಳಿಕ ಅಸ್ಸಾಂನಲ್ಲಿ 600 ಮದರಸಗಳನ್ನು ಮುಚ್ಚಿರುವೆ. ಇನ್ನೂ 300 ಮದರಸಗಳನ್ನು ಮುಚ್ಚುವುದಕ್ಕಾಗಿ ಕೆಲಸ ಮಾಡುತ್ತಿರುವೆ ಎಂದವರು ಹೇಳಿದ್ದಾರೆ.

ರಾಜ್ಯದಲ್ಲಿ ಕಾಲೇಜುಗಳು ಶಾಲೆಗಳು ಮತ್ತು ವಿಶ್ವವಿದ್ಯಾಲಯಗಳನ್ನು ನಿರ್ಮಿಸುವುದಕ್ಕಾಗಿ 600 ಮದರಸಗಳನ್ನು ಮುಚ್ಚಿರುವೆ ಎಂದು ಅವರು ಈ ಹಿಂದೆ ಹೇಳಿದ್ದರು. ಎಲ್ಲ ಮದರಸಗಳನ್ನು ಮುಚ್ಚುವುದಕ್ಕೆ ನಾನು ಬಯಸುತ್ತಿರುವೆ. ಯಾಕೆಂದರೆ ನಮಗೆ ಮದರಸಗಳು ಬೇಡ, ನಮಗೆ ಶಾಲೆಗಳು ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳು ಬೇಕು ಎಂದವರು ಹೇಳಿದ್ದಾರೆ.

ಅಲ್ಲದೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದಾಗಿಯೂ ಮತ್ತು ಬಹುಪತ್ನಿತ್ವವನ್ನು ರದ್ದುಪಡಿಸುವುದಾಗಿಯೂ ಅವರು ಹೇಳಿದ್ದಾರೆ.