ಕಣ ಕಾಲುಗಳಲ್ಲಿ ಊತ ಬಂದಿದೆಯೇ? ನಿರ್ಲಕ್ಷಿಸಬೇಡಿ, ಹೃದಯ ತೊಂದರೆಯೂ ಇದ್ದೀತು

0
282

ಸನ್ಮಾರ್ಗ ವಾರ್ತೆ

ಆತ ನೋಡ ನೋಡುತ್ತಿದ್ದಂತೆಯೇ ಕುಸಿದು ಬಿದ್ದು ಸತ್ತು ಹೋದ ಅನ್ನುವ ಮಾತುಗಳು ಆಗಾಗ ಕೇಳಿ ಬರುವುದಿದೆ. ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಿರುವಾಗ ಅಥವಾ ಮದುವೆಯಲ್ಲಿ ನೃತ್ಯ ಮಾಡುತ್ತಿರುವಾಗ ಹೀಗೆ ಅಚಾನಕ್ಕಾಗಿ ಹೃದಯಾಘಾತ ಸಂಭವಿಸಿ ಸಾವಿಗೀಡಾಗುವ ಸುದ್ದಿಯನ್ನು ನಾವು ಕೇಳುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿಈ ಮಾಹಿತಿ.

ನಿಮಗೆ ವಿಪರೀತ ಕೆಮ್ಮು ಅಥವಾ ಉಬ್ಬಸ ಉಸಿರಾಟದ ತೊಂದರೆ ಉಂಟಾಗುತ್ತಿದ್ದರೆ ಎಂದಿಗೂ ಅದನ್ನು ನಿರ್ಲಕ್ಷಿಸಬಾರದು. ಬದಲಾಗಿ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆದುಕೊಳ್ಳಬೇಕು.

ದೇಹದಲ್ಲಿ ರಕ್ತ ಪರಿಚಲನೆಗೆ ತೊಂದರೆ ಉಂಟಾದಾಗ ದೇಹದ ಕೆಳಗಿನ ಭಾಗಗಳಿಂದ ಬಳಸಿದ ರಕ್ತವನ್ನು ಮರಳಿ ತರಲು ವಿಫಲವಾಗುತ್ತದೆ. ಇದು ಕಾಲುಗಳು, ಕಣಕಾಲುಗಳು ಹೊಟ್ಟೆ ಮತ್ತು ತೊಡೆಗಳಲ್ಲಿ ದ್ರವವನ್ನು ಸಂಗ್ರಹಿಸುತ್ತದೆ. ಇದು ಊತಕ್ಕೆ ಕಾರಣವಾಗುತ್ತದೆ. ಇದರ ಅರ್ಥ ನಿಮ್ಮ ಹೃದಯವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದಾಗಿದೆ.

ಉಸಿರಾಟದ ತೊಂದರೆ ಎದುರಾದರೂ ಕೂಡ ವೈದ್ಯರನ್ನು ಸಂಪರ್ಕಿಸಬೇಕು. ಸಾಕಷ್ಟು ವಿಶ್ರಾಂತಿ ಪಡೆದ ನಂತರವೂ ಆಯಾಸವನ್ನು ಹೊಂದಿದ್ದರೆ ನಿಮ್ಮ ಹೃದಯವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ.

ಹೃದಯ ವೈಫಲ್ಯದ ಆರಂಭಿಕ ಲಕ್ಷಣಗಳನ್ನು ತಿಳ್ಕೊಂಡು ವೈದ್ಯರನ್ನು ಸಂಪರ್ಕಿಸುವುದು ಬಹಳ ಅಗತ್ಯ.