ಅಯೋಧ್ಯೆ: ಶಾಂತಿಯಿಂದ ಬದುಕಲು ಬಿಡುವುದಿಲ್ಲವೇ- ಸುಪ್ರೀಂಕೋರ್ಟಿನ ಪ್ರಶ್ನೆ

0
768

ಹೊಸದಿಲ್ಲಿ,ಎ.13: ಅಯೋಧ್ಯೆಯ ವಿವಾದಿತ ಜಮೀನಿನಿಂದ ಹೊರಗಿರುವ 67.7 ಎಕರೆಯಲ್ಲಿ ಪೂಜೆ ನಡೆಸಲು ಅನುಮತಿ ನೀಡಬೇಕೆಂದು ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟು ಶುಕ್ರವಾರ ತಳ್ಳಿಹಾಕಿದೆ. ದೇಶದಲ್ಲಿ ಶಾಂತಿಯಿಂದ ಬದಕಲು ಬಿಡುವುದಿಲ್ಲವೇ ಎಂದು ಅರ್ಜಿದಾರರೊಡನೆ ಚೀಫ್ ಜಸ್ಟಿಸ್ ರಂಜಿತ್ ಗೊಗೊಯಿ ಪ್ರಶ್ನಿಸಿದರು. ರಾಮನವಿ ದಿನದಲ್ಲಿ ಅಯೋಧ್ಯೆಯ ವಿವಾದವಿಲ್ಲ ಜಮೀನಿನಲ್ಲಿ ಪೂಜೆ ಮಾಡಲು ಅನುಮತಿ ನೀಡಬೇಕೆಂದು ಆಗ್ರಹಿಸಿ ಪಂಡಿತ್ ಅಮರ್‍ನಾರ್ಥ ಮಿಶ್ರ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಹಿಂದೆ ಅಲಾಹಬಾದ್ ಹೈಕೋರ್ಟು ಇದೇ ಬೇಡಿಕೆಯೊಂದಿಗೆ ಸಲ್ಲಿಸಿದ್ದ ಅರ್ಜಿಯನ್ನು ತಳ್ಳಿಹಾಕಿ ಐದು ಲಕ್ಷ ರೂಪಾಯಿ ದಂಡ ವಿಧಿಸಿತ್ತು. ನಂತರ ಪಂಡಿತ್ ಅಮರ್‍ನಾಥ್ ಮಿಶ್ರ ಸುಪ್ರೀಂಕೋರ್ಟಿನಲ್ಲಿ ಅರ್ಜಿಸಲ್ಲಿಸಿದ್ದರು. ಹೈಕೋರ್ಟಿನ ಐದು ಲಕ್ಷ ರೂಪಾಯಿ ದಂಡವನ್ನು ಸುಪ್ರೀಂಕೋರ್ಟು ಎತ್ತಿ ಹಿಡಿದಿದೆ.

ಬಾಬರಿ ಮಸೀದಿ ವಿವಾದ ಸ್ಥಳಕ್ಕೆ ಸಂಬಂಧಿಸಿದ ವಿವಾದವನ್ನು ಮಧ್ಯಸ್ಥಿತಿಕೆ ಚರ್ಚೆಯ ಮೂಲಕ ಬಗೆಹರಿಸಬೇಕೆಂದು ಸುಪ್ರೀಂಕೋರ್ಟು ಇತ್ತೀಚೆಗೆ ಆದೇಶ ಹೊರಡಿಸಿದೆ. ಮಧ್ಯಸ್ಥಿತಿಕೆಗೆ ಜಸ್ಟಿಸ್ ಫಕೀರ್ ಮುಹಮ್ಮದ್ ಇಬ್ರಾಹೀಂ ಖಲೀಫುಲ್ಲ ಅಧ್ಯಕ್ಷತೆಯ ಮೂವರು ಸದಸ್ಯರ ಸಮಿತಿಯನ್ನು ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಅಧ್ಯಕ್ಷತೆಯ ಸಾಂವಿಧಾನ ಪೀಠ ನೇಮಿಸಿದೆ.