ಶ್ರೀಲಂಕಾದಲ್ಲಿ ಸರಣಿ ಸ್ಫೋಟ: 300ಕ್ಕೆ ತಲುಪಿದ ಸಾವಿನ ಸಂಖ್ಯೆ

0
1472

ಕೊಲಂಬೊ,ಎ.22: ಶ್ರೀಲಂಕಾದ ಕ್ರೈಸ್ತ ಚರ್ಚ್‍ಗಳು ಮತ್ತು ಹೊಟೇಲುಗಳಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಮೃತಪಟ್ಟವರ ಸಂಖ್ಯೆ ಮುನ್ನೂರಕ್ಕೆ ತಲುಪಿದೆ. ಈಸ್ಟರ್ ದಿನದಲ್ಲಿ ನಡೆದ ದಾಳಿಗೆ ಸಂಬಂಧಿಸಿ 24 ಮಂದಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು. ಈವರೆಗೆ ದಾಳಿಯ ಹೊಣೆಯನ್ನು ಯಾರೂ ವಹಿಸಿಕೊಂಡಿಲ್ಲ. ಧಾರ್ಮಿಕ ಭಯೋತ್ಪಾದಕರು ದಾಳಿಯ ಹಿಂದಿದ್ದಾರೆ ಎಂದು ಶ್ರೀಲಂಕ ಸರಕಾರದ ಪ್ರತಿನಿಧಿಗಳು ಹೇಳಿದರು. 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹಲವಾರು ವಿದೇಶಿಗಳು ಸೇರಿದ್ದಾರೆ. ರಾಜಧಾನಿ ಕೊಲೊಂಬೊ ಸಮೀದಪ ಶಿಂಗ್ರಿಲಾ. ಕಿಂಗ್ಸ್‍ಬರಿ, ಸಿನ್‍ಮನ್ ಗ್ರಾಂಟ್ ಮೊದಲಾದ ಹೊಟೇಲುಗಳಲ್ಲಿ ಮತ್ತು ಸೇಂಟ್ ಆಂಟನೀಸ್ ಚರ್ಚ್, ಸೇಂಟ್ ಸೆಬಸ್ಟ್ರಿಯನ್ ಚರ್ಚ್‌ಗಳಲ್ಲಿ ಸ್ಫೋಟ ನಡೆದಿತ್ತು.

ಶ್ರೀಲಂಕಾದ ನಾಗರಕಿ ಯುದ್ಧ ಕೊನೆಗೊಂಡು ಹತ್ತು ವರ್ಷಗಳ ಬಳಿಕ ನಡೆದ ಅತಿದೊಡ್ಡ ಭಯೋತ್ಪಾದನಾ ದಾಳಿ ಇದಾಗಿದ್ದು ಘಟನೆಯ ನಂತರ ದೇಶಾದ್ಯಂತ ಕಫ್ರ್ಯೂ ಹೇರಲಾಗಿದೆ. ಸಾಮಾಜಿಕ ಮಾಧ್ಯಮಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ನಡುವೆ ಸೋಮವಾರ ಕೊಲೊಂಬೊ ವಿಮಾನ ನಿಲ್ದಾಣದ ಸಮೀಪ ಪೈಪ್ ಬಾಂಬ್ ಕಂಡು ಬಂತು. ಸ್ಥಳೀಯ ನಿರ್ಮಿತ ಕಚ್ಚಾಬಾಂಬು ಇದ್ದಾಗಿದ್ದು ನಿಷ್ಕ್ರಿಯಗೊಳಿಸಲಾಗಿದೆ.