ಮುಂಬೈ ಕ್ರಾಫರ್ಡ್ ಮಾರ್ಕೆಟಿನಲ್ಲಿ ಬೆಂಕಿ

0
630

ಮುಂಬೈ,ಎ.22: ಮಹಾರಾಷ್ಟ್ರದ ಪ್ರಮುಖ ವ್ಯಾಪಾರಿ ಕೇಂದ್ರವಾದ ಕ್ರಾಫರ್ಡ್ ಮಾರ್ಕೆಟಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ನಾಲ್ಕು ಅಗ್ನಿಶಾಮಕ ದಳ ಸ್ಥಳದಲ್ಲಿ ಬೆಂಕಿ ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ವರದಿಯಾಗಿದೆ. ಕ್ರಾಫರ್ಡ್ ಮಾರ್ಕೆಟ್ ದಕ್ಷಿಣ ಮುಂಬೈಯ ಪ್ರಮುಖ ಮಾರಕಟ್ಟೆಯಲ್ಲೊಂದಾಗಿದೆ. ಬೆಳಗ್ಗೆ ಮಾರ್ಕೆಟಿನಲ್ಲಿ ವ್ಯವಹಾರಗಳು ಆರಂಭವಾಗುವ ಮೊದಲು ಬೆಂಕಿ ಆಕಸ್ಮಿಕಕ್ಕೆ ತುತ್ತಾಯಿತು. ಆದ್ದರಿಂದ ಹೆಚ್ಚು ಅಪಾಯವಾಗಿಲ್ಲ. ಆದರೆ ಕಟ್ಟಡದಲ್ಲಿದ್ದ ವಸ್ತುಗಳು ಸುಟ್ಟು ನಾಶವಾದವು. ಸ್ಥಳೀಯ ನಿವಾಸಿಗಳ ಪ್ರಮುಖ ಶಾಪಿಂಗ್ ಕೇಂದ್ರ ಇದಾಗಿದ್ದು ಜೊತೆಗೆ ನಗರದ ಬೃಹತ್ ಮಾರ್ಕೆಟ್ ಕೂಡಾ ಆಗಿದೆ.