ಸಿರಿಯದ ಡೆಮಕ್ರಾಟಿಕ್ ಪೋರ್ಸ್‌ಗೆ ಬೆಂಬಲ: ಫ್ರಾನ್ಸ್‌ಗೆ ಮುನ್ನೆಚ್ಚರಿಕೆ ನೀಡಿದ ಟರ್ಕಿ

0
1192

ಡಮಸ್ಕಸ್,ಎ.22: ಸಿರಿಯದ ಡೆಮಕ್ರಾಟಿಕ್ ಪೋರ್ಸ್(ಎಸ್‍ಡಿಎಫ್) ಪ್ರತಿನಿಧಿ ತಂಡಕ್ಕೆ ಅದ್ದೂರಿ ಸ್ವಾಗತ ನೀಡಿದ ಫ್ರಾನ್ಸ್‌ಗೆ ಟರ್ಕಿ ಮುನ್ನೆಚ್ಚರಿಕೆ ನೀಡಿದೆ. ಕಳೆದ ದಿವಸ ಪ್ಯಾರಿಸ್‍ನಲ್ಲಿ ಅಮೆರಿಕ ಬೆಂಬಲಿತ ಕುರ್ದ್ ಸೈನ್ಯ(ಡೆಮಕ್ರಾಟಿಕ್ ಪೋರ್ಸ್)ದ ಪ್ರತಿನಿಧಿಗಳಿಗೆ ಫ್ರಾನ್ಸಿಸ್ ಸ್ವಾಗತ ನೀಡಿತ್ತು. ನಂತರ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವೇಲ್ ಮಾಕ್ರೋನ್‍ರನ್ನು ಟಿರ್ಕಿ ವಿದೇಶ ಸಚಿವಾಲಯದ ವಕ್ತಾರ ತೀವ್ರವಾಗಿ ಟೀಕಿಸಿದ್ದಾರೆ. ಸಿರಿಯದ ದೇಶವಿರೋಧಿ ಸಂಘಟನೆಯಾದ ಎಸ್‍ಡಿಎಫ್‍ನ್ನು ಟರ್ಕಿಯು ಭಯೋತ್ಪಾದಕರ ಪಟ್ಟಿಗೆ ಸೇರ್ಪಡೆಗೊಳಿಸಿದೆ. ಪಿಕೆಕೆಯೊಂದಿಗೆ ಎಸ್ಡಿಎಫ್‍ಗೆ ಸಂಬಂಧವಿದೆ. ಇವರು ಹಲವು ವರ್ಷಗಳಿಂದ ಟರ್ಕಿಯ ವಿರುದ್ಧ ಯುದ್ಧ ನಿರತರಾಗಿದ್ದಾರೆ ಎಂದು ಟರ್ಕಿ ಹೇಳಿಕೆ ನೀಡಿದೆ.