ಅಮೆರಿಕಾದ ಜೊತೆ ಶಾಂತಿ ಮಾತುಕತೆಗಳನ್ನು ನಡೆಸಿದ ಅಫ್ಘಾನಿಸ್ತಾನ್ ತಾಲಿಬಾನ್ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕ್ಝಯ್, ‘ಅಫ್ಘಾನಿಸ್ತಾನದಲ್ಲಿ ಯುದ್ಧಗಳು ಕೊನೆಗೊಳ್ಳಬೇಕೆಂದು’ ಬಿಬಿಸಿಯ ಸಂದರ್ಶನದಲ್ಲಿ ಹೇಳಿದರು. ಈ ಸಂದರ್ಭದಲ್ಲಿ ಪ್ರಸ್ತುತ ಪರಿಸ್ಥಿತಿಗಳ ಕುರಿತು ಮಾತನಾಡಿದ ಅವರು “ಯುದ್ಧಕ್ಕಿಂತಲೂ ಶಾಂತಿ ಸ್ಥಾಪನೆ ಹೆಚ್ಚು ಕಷ್ಟಕರ ” ಎಂದು ಬಿಬಿಸಿಗೆ ತಿಳಿಸಿದ್ದಾರೆ.
ಸ್ಟಾನಿಕ್ಝಯ್ ಇತ್ತೀಚೆಗೆ ಕತಾರ್ ನಲ್ಲಿ ನಡೆದ ತಾಲಿಬಾನ್ ರಾಜಕೀಯ ಮಾತುಕತೆಯಲ್ಲಿ ನಾಯಕತ್ವ ವಹಿಸಿದ್ದರು. ರಷ್ಯಾದ ಮಾಸ್ಕೋದಲ್ಲಿ ಅಫ್ಘಾನ್ ಪ್ರತಿಪಕ್ಷದ ಹಿರಿಯ ರಾಜಕಾರಣಿಗಳೊಂದಿಗೆ ಸಭೆಯಲ್ಲಿ ಭಾಗವಹಿಸುವ ಮೊದಲು ಅವರು ಬಿಬಿಸಿಗೆ ಸಂದರ್ಶನವನ್ನು ನೀಡಿದರು.












