ನಿರ್ಲಕ್ಷ್ಯ ಸಂಭವಿಸಿತು: ಇನ್ನು ಮುಂದೆ ಯಾವುದೇ ನಾಗರಿಕ ವಾಹನಗಳನ್ನು ಸುರಕ್ಷಾದಳದ ವಾಹನಗಳ ಹತ್ತಿರ ಬರದಂತೆ ತಡೆಯಲಾಗುವುದು- ರಾಜ್ಯಪಾಲ ಸತ್ಯ ಪಾಲ್ ಮಲಿಕ್

0
953

ಶ್ರೀನಗರ:ಪುಲ್ವಾಮದ ಲೆಥಪೊರಾದಲ್ಲಿ ಸಿಆರ್ ಪಿಎಫ್ ವಾಹನ ವ್ಯೂಹದ ಮೇಲೆ ನಡೆದಿರುವ ಭಯೋತ್ಪಾದನಾ ದಾಳಿಯ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಹತ್ವಪೂರ್ಣ ಸಂಸ್ಥೆಗಳಿಗೆ ಬಿಗಿ ಭದ್ರತೆ ಮತ್ತು ಕಟ್ಟೆಚ್ಚರ ವಹಿಸಲು ಕಮಾಂಡರ್‍ಗಳಿಗೆ ಜಮ್ಮು-ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್‍ ರವರು ಆದೇಶಿಸಿದ್ದಾರೆ.

ಇಂತಹ ದಾಳಿಯಿಂದ ನಮ್ಮ ಸುರಕ್ಷಾ ವ್ಯವಸ್ಥೆ ಮತ್ತು ಜನರ ಸಂಕಲ್ಪ ದುರ್ಬಲವಾಗದು. ರಾಜ್ಯಪಾಲರ ವಕ್ತಾರರು ಎಲ್ಲ ಭದ್ರತಾ ಪಡೆಯ ಕಮಾಂಡರ್‍ಗಳಿಗೆ ಪ್ರತಿಯೊಂದು ವಿಷಯದ ಮೇಲೆಯೂ ನಿಗಾ ಇರಿಸಲು ಮತ್ತು ಕಟ್ಟೆಚ್ಚರವಹಿಸಲು ಆದೇಶಿಸಿದ್ದಾರೆ ಎಂದು ತಿಳಿಸಿದರು. ಜೊತೆಗೆ ಜಿಲ್ಲಾ ನಾಗರಿಕ ಮತ್ತು ಪೊಲೀಸ್ ಸಹಿತ ಮಹತ್ವಪೂರ್ಣ ಸಂಸ್ಥೆಗಳ ಭದ್ರತೆಯ ಕುರಿತು ಸಮೀಕ್ಷೆ ನಡೆಸಲು ನಿರ್ದೇಶಿಸಿದ್ದಾರೆ.

ವೀರಮೃತ್ಯುವನ್ನಪ್ಪಿದ ಯೋಧರ ಕುಟುಂಬಕ್ಕೆ ಸಹಾನೂಭೂತಿ ವ್ಯಕ್ತಪಡಿಸಿದರು. ಗಾಯಾಳು ಯೋಧರ ಆರೋಗ್ಯಕ್ಕಾಗಿ ಪ್ರಾರ್ಥಿಸಿದರು. ಇಂತಹ ದಾಳಿಯಿಂದ ಭದ್ರತಾ ಪಡೆಗಳ ಧೈರ್ಯ ಗುಂದದು. ಇಂತಹ ಸಮಾಜ ವಿರೋಧಿ ಶಕ್ತಿಗಳನ್ನು ಸರ್ವನಾಶ ಮಾಡಲಾಗುವುದು. ಭದ್ರತಾ ಪಡೆಯ ಕಾರ್ಯಾಚರಣೆಯಿಂದ ಭಯೋತ್ಪಾದಕರಲ್ಲಿ ನಡುಕು ಹುಟ್ಟಿಸಿದೆ. ಇದರಿಂದ ಅವರು ತಮ್ಮ ಅಸ್ತಿತ್ವವನ್ನು ತೋರಿಸಲಿಕ್ಕಾಗಿ ಇಂತಹ ದಾಳಿ ನಡೆಸಿದ್ದಾರೆ.

ಪೂಲ್ವಾಮ ಜಿಲ್ಲೆಯ ಲೆಫಪೊರಾದಲ್ಲಿ ನಡೆದ ಭಯಾನಕ ಭಯೋತ್ಪಾದಕ ದಾಳಿಯ ಬಳಿಕ ಸುರಕ್ಷೆ ವ್ಯವಸ್ಥೆಯ ಕುರಿತು ಮರುವಿಚಾರ ನಡೆಸಲಾಗುತ್ತಿದೆ. ಸುರಕ್ಷಾ ಏಜೆನ್ಸಿಯ ಮೂಲಗಳು 1990ರಲ್ಲಿ ಯಾರಿಗೂ ಸುರಕ್ಷಪಡೆಯ ಹತ್ತಿರ ಸುಳಿಯಲು ಕೂಡ ಬಿಡುತ್ತಿರಲಿಲ್ಲ. ಇಷ್ಟು ಕಟ್ಟುನಿಟ್ಟಿನ ಸುರಕ್ಷಾ ವ್ಯವಸ್ಥೆ ಮಾಡಲಾಗಿತ್ತು. ಇಂತಹದೆ ವ್ಯವಸ್ಥೆ ಮಾಡಲು ಚಿಂತನೆ ನಡೆಯುತ್ತಿದೆ ಎಂದು ಅವುಗಳು ತಿಳಿಸಿವೆ. ಇನ್ನು ಮುಂದೆ ಯಾವುದೇ ನಾಗರಿಕ ವಾಹನಗಳನ್ನು ಸುರಕ್ಷಾದಳದ ವಾಹನ ವ್ಯೂಹದ ಹತ್ತಿರ ಬರದಂತೆ ತಡೆಯಲಾಗುವುದು.