ಸನ್ಮಾರ್ಗ ವಾರ್ತೆ
ಇಸ್ತಾಂಬುಲ್ : ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಸುಮಾರು 50 ಜನರು ಬಲಿಯಾಗಿದ್ದಾರೆ. ಹಲವಾರು ಕಟ್ಟಡಗಳು ಕುಸಿದಿದೆ. ದಕ್ಷಿಣ ಟರ್ಕಿ, ಸಿರಿಯನ್ ಗಡಿ ಭಾಗದಲ್ಲಿ ರಿಕ್ಟರ್ ಮಾಪಕ 7.8 ತೀವ್ರತೆಯಲ್ಲಿ ದಾಖಲಾದ ಈ ಭೂಕಂಪ
ಮುಂಜಾನೆ 4 ಗಂಟೆಗೆ ಸಂಭವಿಸಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ.
ಸೈ ಪ್ರೆಸ್ , ಲೆಬನಾನ್ ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ. ಗಾಸಿಯನ್ ನಗರದಲ್ಲಿ 26 ಕಿಲೋಮೀಟರ್ ದಕ್ಷಿಣದ ಭೂಮಿಯ 17.9 ಕಿಲೋಮೀಟರ್ ಆಳದಲ್ಲಿ ಭೂಕಂಪದ ಪ್ರಭಾವ ಕೇಂದ್ರವಿದೆ ಎಂದು ಯು ಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ












