ಸನ್ಮಾರ್ಗ ವಾರ್ತೆ
ಹೊಸದಿಲ್ಲಿ: ದೇಶದಲ್ಲಿ ಪ್ರತಿದಿನ ಕೊರೊನಪೀಡಿತರ ಸಂಖ್ಯೆ ಲಕ್ಕವನ್ನೂ ಮೀರಿದೆ. 24 ಗಂಟೆಗಳಲ್ಲಿ 90.928 ಮಂದಿಗೆ ರೋಗ ವ್ಯಾಪಿಸಿದೆ. 325 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೋನ ಪೀಡಿತರ ಸಂಖ್ಯೆ 4, 82,876ಕ್ಕೇರಿಕೆಯಾಗಿದೆ. ನಿನ್ನೆಗೆ ಹೋಲಿಸಿದರೆ ಶೇ. 56.5ರಷ್ಟು ಕೊರೊನ ಪ್ರಕರಣಗಳಲ್ಲಿ ಹೆಚ್ಚಳ ಆಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿತು.
58097 ಮಂದಿಗೆ ಕೊರೋನ ದೃಢಪಟ್ಟಿದ್ದು, ಆದರೆ ಕೊರೊನದಿಂದ ಗುಣಮುಖರಾದವರ ಸಂಖ್ಯೆ 97.81 ಆಗಿದೆ. 24 ಗಂಟೆಗಳಲ್ಲಿ 19,206 ಮಂದಿ ಕೊರೋನದಿಂದ ಗುಣಮುಖರಾದರು. ಈಗ ಚಿಕಿತ್ಸೆಯನ್ನು 2. 85,401 ಮಂದಿ ಪಡೆಯುತ್ತಿದ್ದಾರೆ.
ಒಮಿಕ್ರಾನ್ 2630 ಒಮಿಕ್ರಾನ್ ಪೀಡಿತರ ಸಂಖ್ಯೆ ಆಗಿದ್ದು ಮಹಾರಾಷ್ಟ್ರದಲ್ಲಿ 797 ಮಂದಿಗೆ ತಗುಲಿದ್ದು ಇದು ದೇಶದಲ್ಲಿಯೇ ಅತಿಹೆಚ್ಚು. ಒಮಿಕ್ರಾನ್ ಕೊರೋನದ ಹೊಸ ರೂಪಾಂತರ. ದಿಲ್ಲಿಯಲ್ಲಿ 465 ಮಂದಿಗೆ ಒಮಿಕ್ರಾನ್ ದೃಢಪಟ್ಟಿದ್ದು ದೇಶದ 26 ರಾಜ್ಯಗಳಲ್ಲಿ ಇದುವರೆಗೆ ಒಮಿಕ್ರಾನ್ ಪ್ರಕರಣ ವರದಿಯಾಗಿವೆ. ಕೊರೋನ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ರಾಜ್ಯಗಳಲ್ಲಿ ರಾತ್ರೆ ಕಫ್ರ್ಯೂ ಘೋಷಿಸಲಾಗಿದೆ. ದಿಲ್ಲಿ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಘೋಷಣೆ ಮಾಡಲಾಗಿದೆ.












