ಮಧ್ಯಪ್ರದೇಶ| ಸರಕಾರಿ ಗುಮಾಸ್ತನ ಮನೆಯಿಂದ 85 ಲಕ್ಷ ರೂ. ವಶ: ಇಒಡಬ್ಯೂ ದಾಳಿಗೆ ಹೆದರಿ ವಿಷ ಸೇವನೆ!

0
18

ಸನ್ಮಾರ್ಗ ವಾರ್ತೆ

ಭೋಪಾಲ: ಮಧ್ಯಪ್ರದೇಶದಲ್ಲಿ ಗುಮಾಸ್ತನ ವಾಸಸ್ಥಳದಿಂದ 85 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ. ಲೆಕ್ಕಕ್ಕೇ ಸೇರದ ಆಸ್ತಿಯ ಕುರಿತ ದೂರಿನಲ್ಲಿ ದಾಳಿ ನಡೆದಿತ್ತು. ದಾಳಿಯ ವೇಳೆಯೇ ಗುಮಾಸ್ತ ವಿಷಸೇವನೆ ಮಾಡಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಈತನ ವಿಚಾರಣೆ ನಡೆಸಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಮಧ್ಯಪ್ರದೇಶ ಇಕನಾಮಿಕ್ ಒಫೆನ್ಸಸ್ ವಿಂಗ್(EOW) ಬುಧವಾರ ಕ್ಲರ್ಕ್ ಕೇಸ್ವಾನಿ ಮನೆಯಿಂದ 85 ಲಕ್ಷ ಹಣವನ್ನು ವಶಪಡಿಸಿಕೊಂಡಿದೆ.

ಕ್ಲರ್ಕ್ ಕೇಸ್ವಾನಿ ಮೊದಲು ಅಧಿಕಾರಿಗಳನ್ನು ಮನೆಯೊಳಗೆ ಬರಲು ಬಿಡದೇ ತಡೆದಿದ್ದನು. ಆದರೆ, ಅಧಿಕಾರಿಗಳು ಮನೆಯೊಳಗೆ ಹೋದಾಗ ಕೂಡಲೇ ಬಾತ್‍ರೂಮ್ ಕ್ಲೀನರ್ ಕುಡಿದಿದ್ದಾನೆ ಎಂದು ಅಧಿಕಾರಿಗಳು ಹೇಳಿದರು. ಕೂಡಲೇ ಸಮೀಪದ ಆಸ್ಪತ್ರೆಗೆ ಈತನನ್ನು ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದು ಚೇತರಿಸಿಕೊಳ್ಳಿತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ಮೆಡಿಕಲ್ ವಿದ್ಯಾಭ್ಯಾಸ ಇಲಾಖೆಯಲ್ಲಿ ಅಪ್ಪರ್ ಡಿವಿಷನ್ ಕ್ಲರ್ಕ್ ಆಗಿದ್ದ ಕೇಸ್ವಾನಿ ಮನೆಯಿಂದ ಕೋಟ್ಯಂತರ ಮೌಲ್ಯದ ಸ್ಥಿರ ಚರ ದಾಖಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬುಧವಾರ ಮಧ್ಯ ರಾತ್ರೆಯವರೆಗೆ ಕ್ಲರ್ಕ್‌ನ ಮನೆಯಲ್ಲಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು.

4000 ರೂಪಾಯಿಯ ಸಂಬಳಕ್ಕೆ ಹೀರೋ ಕೇಸ್ವಾನಿ ಉದ್ಯೋಗ ಆರಂಭಿಸಿದ್ದನು. ಪ್ರಸ್ತುತ ಈತನಿಗೆ ಪ್ರತೀ ತಿಂಗಳು 50,000 ಸಂಬಳ ಪಡೆಯುತ್ತಿದ್ದನು. ಆದರೆ, ಕೇಸ್ವಾನಿ ಮನೆಯಲ್ಲಿ ಅಲಂಕಾರಕ್ಕೆ ಬಳಸುವ ವಸ್ತುಗಳಿಗೇ ಒಂದೂವರೆ ಕೋಟಿ ರೂಪಾಯಿ ಮೌಲ್ಯ ಇರಬಹುದೆಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

LEAVE A REPLY

Please enter your comment!
Please enter your name here