ಆಗಸ್ಟ್ 8ರ ವರೆಗೆ ಸಂಜಯ್‌ ರಾವತ್‌ ಇ.ಡಿ ಕಸ್ಟಡಿ ವಿಸ್ತರಣೆ

0
17

ಸನ್ಮಾರ್ಗ ವಾರ್ತೆ

ಮುಂಬೈ: ಶಿವಸೇನೆಯ ನಾಯಕ ಸಂಜಯ್ ರಾವತ್‍ರ ಕಸ್ಟಡಿಯನ್ನು ಆಗಸ್ಟ್ 8ರ ವರೆಗೆ ಮುಂಬೈ ವಿಶೇಷ ನ್ಯಾಯಾಲಯವು ವಿಸ್ತರಿಸಿದ್ದು ಅವರನ್ನು ಮಂಗಳವಾರ ಕೋರ್ಟಿನ ಮುಂದೆ ಹಾಜರುಪಡಿಸಲಾಗಿತ್ತು. ಇದೇ ವೇಳೆ ಇಡಿ ಕಸ್ಟಡಿ ವಿಸ್ತರಣೆಗೆ ಮನವಿ ಮಾಡಿತ್ತು.

ಕಳೆದ ರವಿವಾರ ಮುಂಬೈನ ಅವರ ನಿವಾಸದಲ್ಲಿ ತಪಾಸಣೆ ನಡೆಸಿದ ಬಳಿಕ ಇಡಿ ರಾವತ್‍ರನ್ನು ಬಂಧಿಸಿತ್ತು. ವಸತಿಯಲ್ಲಿ 11.5 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿತ್ತು. ಮುಂಬೈಯಲ್ಲಿ ಕಡಿಮೆ ದರದಲ್ಲಿ ಮನೆ ಪುನರ್‌ ನಿರ್ಮಾಣಕ್ಕೆ ಸಂಬಂಧಿಸಿ ರಾವತ್‍ರ ಪತ್ನಿ ಮತ್ತು ಸಂಗಡಿಗರು ನಡೆಸಿದ್ದಾರೆನ್ನಲಾದ ಆರ್ಥಿಕ ವ್ಯವಹಾರದ ಹೆಸರಿನಲ್ಲಿ ಸಂಜಯ್ ರಾವತ್‍ರನ್ನು ಬಂಧಿಸಲಾಗಿದೆ. ಕಳೆದ ಎಪ್ರಿಲ್‍ನಲ್ಲಿ ರಾವತ್‍ರ ಪತ್ನಿ, ಇಬ್ಬರು ಮಕ್ಕಳಿಗೆ ಸೇರಿದ 11.15 ಕೋಟಿ ರೂಪಾಯಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿತ್ತು.

LEAVE A REPLY

Please enter your comment!
Please enter your name here