ಹೊಸದಿಲ್ಲಿ,ಎ.6 : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಅನರ್ಹಗೊಳಿಸಬೇಕೆಂದು ಆಗ್ರಹಿಸಿ ಚುನಾವಣಾ ಅಯೋಗದ ಮೊರೆಹೋಗಿದೆ. ಅಮಿತ್ ಶಾ ಸಲ್ಲಿಸಿದ ಅಫಿದಾವಿತ್ನಲ್ಲಿ ಅಮಿತ್ ಶಾ ಕೆಲವು ವಿಷಯಗಳನ್ನು ಬಹಿರಂಗೊಳಿಸಿಲ್ಲ ಎಂದು ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿ ಅವರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದೆ.
ಗಾಂಧಿ ನಗರದ ಕುರಿತು ಮತ್ತು ಬ್ಯಾಂಕ್ ಸಾಲದ ಕುರಿತು ಅಮಿತ್ ಶಾ ಸುಳ್ಳು ವಿವರಗಳನ್ನು ನೀಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಅಮಿತ್ ಶಾರ ಮಾಲಕತ್ವದ ಗಾಂಧಿನಗರದ ಜಮೀನಿಗೆ 25ಸಾವಿರ ರೂಪಾಯಿ ಎಂದು ಅಪಿದಾವಿತ್ನಲ್ಲಿ ತಿಳಿಸಲಾಗಿದ್ದು ಇದು ಸರಕಾರಿ ಮೌಲ್ಯದಂತೆ 66.5 ಲಕ್ಷ ರೂಪಾಯಿಯ ಜಮೀನು ಆಗಿದೆ. ಪುತ್ರ ಜಯ್ ಶಾರಿಗಾಗಿ ಸಾಲ ಪಡೆದಿರುವ ವಿವರಗಳನ್ನು ಕೂಡ ಅಮಿತ್ ಶಾ ಬಚ್ಚಿಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತು.
ಅಮಿತ್ ಶಾ ವಿರುದ್ಧ ಶೀಘ್ರ ಕ್ರಮಜರಗಿಸಬೇಕೆಂದು ಕಾಂಗ್ರೆಸ್ ದೂರಿನಲ್ಲಿ ಆಗ್ರಹಿಸಿದ್ದು, ಅಮಿತ್ ಶಾರನ್ನು ಸ್ಪರ್ಧಿಸದಂತೆ ತಡೆಯಬೇಕು. ಸುಳ್ಳು ಅಪಿಧಾವಿತ್ ನೀಡಿರುವ ಶಾರ ವಿರುದ್ಧ ಕಾನೂನು ಕ್ರಮ ಜರಗಿಸಬೇಕೆಂದು ಕಾಂಗ್ರೆಸ್ ಚುನಾವಣಾ ಆಯೋಗವನ್ನು ವಿನಂತಿಸಿದೆ.












