ಪಕ್ಷದ ಹಿಂದುತ್ವ ಅಜೆಂಡಾ ನನ್ನ ರಾಜ್ಯದಲ್ಲಿ ಕೆಲಸ ಮಾಡಲ್ಲ: ಬಿಜೆಪಿ ಉಪಾಧ್ಯಕ್ಷ ಬೋಸ್

0
1771

ಸಂದರ್ಶನ

ಸುಭಾಷ್ ಚಂದ್ರ ಬೋಸ್ ಅವರ ಸೋದರ ಮೊಮ್ಮಗ ಮತ್ತು ಬಂಗಾಳ ಬಿಜೆಪಿ ಉಪಾಧ್ಯಕ್ಷ  ಚಂದ್ರ ಕುಮಾರ್ ಬೋಸ್ ಹೇಳುತ್ತಾರೆ-   ಬಿಜೆಪಿ ಮತ್ತು ಬಂಗಾಳದ ಮತದಾರರ ನಡುವೆ ಸಂಪರ್ಕ ಕಡಿತಗೊಂಡಿದೆಯೆಂದು.

✒ಮೂಲ: ಪ್ರಿಯಶ್ರೀ ದಾಸ್ ಗುಪ್ತ

✒ಕನ್ನಡಕ್ಕೆ: ಆಯಿಷತುಲ್ ಅಫೀಫ

ಐವತ್ತೇಳು  ವರ್ಷದ ಚಂದ್ರ ಕುಮಾರ್ ಬೋಸ್ ಅವರ ಫೇಸ್ಬುಕ್ ಪುಟವು ತನ್ನ ಅಜ್ಜ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಲೇಖನಗಳ ಸಾಕಷ್ಟು ಕೊಂಡಿಗಳನ್ನು ಹೊಂದಿದೆ. ಕೋಲ್ಕತ್ತಾ ಮೂಲದ ಐಟಿ ಉದ್ಯಮಿ ಬೋಸ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ದ  ಬಂಗಾಳ ಘಟಕದ ಉಪಾಧ್ಯಕ್ಷರಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು , ಪಶ್ಚಿಮ ಬಂಗಾಳದಲ್ಲಿ ಪಕ್ಷದ ಕಾರ್ಯ ನಿರ್ವಹಣೆ  ಬಗ್ಗೆ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂದರ್ಶನದ ಆಯ್ದ ಭಾಗಗಳು:

? ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರದ ಪ್ರತೀಕವೆಂದು ಪರಿಗಣಿಸಲಾಗುತ್ತದೆ ಮತ್ತು ಅದು ಹಿಂದೆ ಬಿಜೆಪಿಗೆ ಫಲಿತಾಂಶಗಳನ್ನು ಗಳಿಸಿ ಕೊಟ್ಟಿದೆ. ಪಶ್ಚಿಮ ಬಂಗಾಳದಲ್ಲಿ ಏನು ತಪ್ಪಾಗಿದೆ?

ಅದನ್ನು ನೋಡೋಣ , ನಮ್ಮ ಸಂಘಟನೆಯು ದುರ್ಬಲವಾಗಿದೆ. ನಮ್ಮ ಜನರನ್ನು ನಾವು ತಿಳಿದಿಲ್ಲ. ನಮ್ಮ ಮತದಾರರನ್ನು ನಾವು ತಿಳಿದಿಲ್ಲ. ಇಂದು ನಾವು ಪಶ್ಚಿಮ ಬಂಗಾಳದ ಹೆಚ್ಚಿನ ಮತದಾರರ  ಜೊತೆ ಸಂಪರ್ಕ ಸಾಧಿಸಲು ವಿಫಲರಾಗಿದ್ದೇವೆ . ನೀವು ಪರೀಕ್ಷೆಗೆ ಕುಳಿತುಕೊಳ್ಳುವಿರಾದರೆ , ನೀವು ಸಂಪೂರ್ಣ 100 ಅಂಕಗಳಿಗೆ ಕುಳಿತುಕೊಳ್ಳಬೇಕು . ನೀವು 50 ಅಥವಾ 60 ಅಂಕಗಳಿಗೆ  ಕುಳಿತುಕೊಳ್ಳಲು ಸಾಧ್ಯವಿಲ್ಲ. ನೀವು ಹಾಗೆ ಮೊದಲ ಸ್ಥಾನ ಪಡೆಯಲೂ  ಸಾಧ್ಯವಿಲ್ಲ.

ಪಶ್ಚಿಮ ಬಂಗಾಳದ ಬಿಜೆಪಿಯ ಸಮಸ್ಯೆಯೇನೆಂದರೆ ನಾವು 100 ಅಂಕಗಳ ಪರೀಕ್ಷೆಗೆ ಕುಳಿತುಕೊಳ್ಳುತ್ತಿಲ್ಲ .ಏಕೆಂದು ವಿವರಿಸುತ್ತೇನೆ. . . .

ನಮ್ಮ ಮತ ಬ್ಯಾಂಕ್ ಸಾಂಪ್ರದಾಯಿಕವಾಗಿ 4-6% ಆಗಿದೆ . ಅದು ಕಾಲದಿಂದಲೂ ಹಾಗೆ ಇದೆ ,  ನಾವು ಅದನ್ನು ಹೆಚ್ಚಿಸಲು ಪ್ರಯತ್ನಿಸಲಿಲ್ಲ. 80 ರ ದಶಕದಿಂದಲೂ ನಾವು ಇಲ್ಲಿದ್ದೇವೆ, ಆದರೆ 1998 ರಲ್ಲಿ ಮಮತಾ ಬ್ಯಾನರ್ಜಿಯವರು ಬಂದರು. ಹತ್ತು ವರ್ಷಗಳಲ್ಲಿ,ನಾವು ಅವರ ಮುಂದಿದ್ದರೂ ಹೆಚ್ಚಿನ ಮತದಾರರ ಬಳಿ ಸಂಪರ್ಕ ಸಾಧಿಸಲು ಸಾಧ್ಯವಾದ ಕಾರಣ ಅವರು ಅದನ್ನು ಮಾಡಿ ತೋರಿಸಿದರು.

ಲೋಕಸಭೆ ಚುನಾವಣೆಯಲ್ಲಿ 17% ಕ್ಕೆ  ಮತ ಹಂಚಿಕೆಯು ಏರಿಕೆಯಾಯಿತು, ಆದರೆ ಲೋಕಸಭಾ ಚುನಾವಣೆ ಮೋದಿ ಅಲೆಯಿಂದ ಕೂಡಿತ್ತು.  ಪಶ್ಚಿಮ ಬಂಗಾಳದಲ್ಲಿ ಮೋದಿ ಅಲೆಯನ್ನು ಪ್ರತಿಬಂಧಿಸಲಾಗಿದೆ . ಮತ್ತೆ 2016 ರಲ್ಲಿ ನಮ್ಮ ಮತ ಹಂಚಿಕೆಯು  11% ಕ್ಕೆ ಇಳಿದಿದೆ. ಮತ್ತೆ ಪಂಚಾಯತ್ ಚುನಾವಣೆಗಳಲ್ಲಿ  ಹಿಂಸಾಚಾರ ಸಂಭವಿಸಿದೆ. ನಾವು 30 ಕಾರ್ಯಕರ್ತರನ್ನು  ಕಳೆದುಕೊಂಡಿದ್ದೇವೆ. ಬಹಳಷ್ಟು ಹಿಂಸಾಚಾರಗಳು ನಡೆದಿವೆ, ಇದು ಟಿಎಂಸಿ ಮಾಡುತ್ತಿರುವ ಮತ್ತೊಂದು ವಿಷಯ, ಇತರ ಪಕ್ಷಗಳೊಂದಿಗೆ ಸೇರುವ ಯಾರನ್ನೇ ಆದರೂ ಬಡಿಯುವುದು.

? ಹಾಗಾದರೆ ಎಲ್ಲಿ ಸಂಪರ್ಕ ಕಡಿತಗೊಂಡಿದೆ? ಬಂಗಾಳದ ಜನರೊಂದಿಗೆ ಸಂಪರ್ಕ ಸಾದಿಸಲು ಬಿಜೆಪಿ ಏಕೆ ಪ್ರಯತ್ನಿಸುತ್ತಿಲ್ಲ?

ಪಶ್ಚಿಮ ಬಂಗಾಳದಲ್ಲಿ ಹಿಂದೂ ಮತಗಳು ಶೇಕಡಾ 70ರಷ್ಟೂ ಇಲ್ಲ.  ಇದು ಸುಮಾರು 60%ದಷ್ಟಿದೆ.  ಈ 60%ದಲ್ಲಿ , 45-48% ಬಂಗಾಳಿ ಹಿಂದೂಗಳು, ಇದು ಪಶ್ಚಿಮ ಬಂಗಾಳದ  ಮತದ ಬಹುಪಾಲು . ಹಿಂದಿ ಮಾತನಾಡುವ ಹಿಂದೂಗಳು ಸಾಕಷ್ಟಿದ್ದಾರೆ . ಆದರೆ ಬಹಳಷ್ಟು ಹಿಂದಿ-ಭಾಷಿಗ ಹಿಂದೂಗಳು  ಇತರ ರಾಜ್ಯಗಳಲ್ಲಿ  , ಜಾರ್ಖಂಡ್, ಉತ್ತರಪ್ರದೇಶ, ಮಧ್ಯಪ್ರದೇಶದಲ್ಲಿ ಮತಗಳನ್ನು  ಹೊಂದಿದ್ದಾರೆ . ನಮ್ಮ ಎಲ್ಲಾ ಚಳವಳಿಗಳಲ್ಲಿ ಅವರು ನಮ್ಮ ಧ್ವಜಗಳನ್ನು ಹಿಡಿದು ಭಾಗವಹಿಸುತ್ತಾರೆ , ಅವರು ನಮ್ಮ ಘೋಷಣೆಗಳನ್ನು ಮತ್ತು ‘ಭಾರತ್ ಮಾತಾ ಕಿ ಜೈ’ ಯನ್ನು ಕೂಗುತ್ತಾರೆ , ಆದರೆ ಅವರ ಮತಗಳು ಬೇರೆಡೆ. ಆದರೆ ನಾವು ಬಂಗಾಳಿ ಹಿಂದೂ ಮತ ಬ್ಯಾಂಕ್ ಗೆ ಪ್ರವೇಶಿಸಲು ಸಾಧ್ಯವಾಗುತ್ತಿಲ್ಲ.

ಬಂಗಾಳಿ ಹಿಂದೂ ಮತದಾರನ್ನು  ಆಕರ್ಷಿಸಲು, ಪಕ್ಷವು ಒಟ್ಟು ಚಿತ್ರಣವನ್ನು ತಿಳಿದಿರಬೇಕು . ಅದಕ್ಕಾಗಿ ನಾವು ಬುದ್ಧಿಜೀವಿಗಳನ್ನು ಮುಂಚೂಣಿಯಲ್ಲಿಡಬೇಕು. ಆಗ ಮಾತ್ರ ಸಾಧ್ಯ ಇದಲ್ಲದೆ, ನಾವು ಮಮತಾ ಬ್ಯಾನರ್ಜಿ ವಿರುದ್ಧ ಹೋರಾಡುವ ಸ್ಥಿತಿಯಲ್ಲಿಲ್ಲ.

? ಹಾಗಾದರೆ, ಯುಪಿ ಅಥವಾ ರಾಜಸ್ಥಾನದಂತಹ ಬೇರೆಡೆ ಕೆಲಸ ಮಾಡುವ ತಂತ್ರಗಳು ಇಲ್ಲಿ ಕೆಲಸ ಮಾಡುತ್ತಿಲ್ಲವೆಂದು  ಎಂದು ನೀವು ಹೇಳುತ್ತಿದ್ದೀರಾ?

ಇಲ್ಲ, ಅದು ಮಾಡುತ್ತಿಲ್ಲ  ಮತ್ತು ನಾನು ಇದನ್ನು ಅಮಿತ್ ಶಾಗೂ ತಿಳಿಸಿರುವೆ.

ಆದರೆ ಬಿಜೆಪಿ ಇನ್ನೂ ಅದೇ ರೀತಿಯ ವಾಕ್ಚಾತುರ್ಯವನ್ನು ಅನುಸರಿಸುತ್ತಿದೆ. ಅಭಿವೃದ್ಧಿಯ ಬಗ್ಗೆ ಮಾತನಾಡುವುದಿಲ್ಲ, ಅವರು ಧರ್ಮದ ಬಗ್ಗೆ ಮಾತನಾಡುತ್ತಿದ್ದಾರೆ ಮತ್ತು ಕೆಲವೊಮ್ಮೆ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ …

ಇಲ್ಲ, ಭ್ರಷ್ಟಾಚಾರ ಪಶ್ಚಿಮ ಬಂಗಾಳದಲ್ಲಿ  ಸಮಸ್ಯೆಯಲ್ಲ . ಭ್ರಷ್ಟಾಚಾರ ಸಮಸ್ಯೆಯಿದ್ದರೆ  2016 ರಲ್ಲಿ ಮಮತಾ ಬ್ಯಾನರ್ಜಿ ಮತವನ್ನು ಕಳೆದುಕೊಳ್ಳುತ್ತಿದ್ದರು . ನಾನು ಬೆಲ್ಟಾಳ ಕೊಳಗೇರಿಗೆ  (ಬ್ಯಾನರ್ಜಿ ಕ್ಷೇತ್ರದ ಪ್ರಮುಖ ಸ್ಥಳ) ಹೋಗಿದ್ದೆ, ಆ  ಜನರು ಸಣ್ಣ ಕೋಣೆಗಳಲ್ಲಿ ವಾಸಿಸುತ್ತಿದ್ದರು.  ಆದರೆ ಟಿವಿ ಹೊಂದಿದ್ದರು. ಹಾಗಾಗಿ ಆ ಕೊಠಡಿಗಳನ್ನು  ನಾನು ಪ್ರವೇಶಿಸಿದಾಗ, ನರಾದ ಟೇಪ್ ಗಳು ಪ್ರಸಾರವಾಗುತ್ತಿದ್ದವು . ಹಾಗಾಗಿ, ದೆಕೊ ಚೋರ್ ಪಾರ್ಟಿ ಹೈ’ (ನೋಡಿ, ಇದು ಕಳ್ಳರ ಪಕ್ಷ) ಎಂದು ನಾನು ಅವರಿಗೆ ಹೇಳಿದೆ. ಹಾಗಾಗಿ   ಈ ಪಕ್ಷಕ್ಕೆ ಮತ ಚಲಾಯಿಸಬೇಡಿ. ಆದರೆ ಅವರು ಹೇಳಿದರು, “ನಹಿನ್, ನಹಿನ್ ಸಾಬ್, ಇಸಿ ಕೋ ವೋಟ್ ಧೂನ್ಗ  (ಇಲ್ಲ ಸರ್, ನಾವು ಅವರಿಗೆ ಮತ ನೀಡುತ್ತೇವೆ ).

ಏಕೆ ಎಂದು ನಾನು ಕೇಳಿದೆ.  ಆಗ  ಅವರು ಹೇಳಿದರು, “ಅವರು ಶ್ರೀಮಂತರಿಂದ ಕದಿಯುತ್ತಾರೆ ಮತ್ತು ಅದನ್ನು ಬಡವರಿಗೆ ಕೊಡುತ್ತಾರೆ ಮತ್ತು ಕೆಲವನ್ನು ತಮ್ಮ ಬಳಿ ಇರಿಸಿಕೊಳ್ಳುತ್ತಾರೆ.  ಅದು ಪರವಾಗಿಲ್ಲ ನಮಗೆ, ನೀವು ಸಹ ಇದನ್ನೇ ಮಾಡಿರಿ .” ಇಲ್ಲಿ ರಾಬಿನ್ ಹುಡ್ ಪರಿಣಾಮ ಮಮತಾ ಬ್ಯಾನರ್ಜಿಗಾಗಿ ಕೆಲಸ ಮಾಡುತ್ತಿದೆ .

? ಆದರೆ ಹಿಂದೂಗಳನ್ನೂ ಕೇಂದ್ರವಾಗಿಟ್ಟು ಕೆಲಸ ಮಾಡುವ ವಿಷಯವನ್ನು ಬಿಜೆಪಿ ಮಾಡುತ್ತಿದೆ, ಅದು ಅವರಿಗೆ ‘ಹಿಂದುತ್ವದ ರಕ್ಷಕ’ನೆಂಬಂತಹ ಚಿತ್ರಣವನ್ನು ನೀಡುತ್ತಿದೆ. ಮಕ್ಕಳು ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡ  ಬಂಗಾಳದ ಬಿಜೆಪಿಯ ಅಧ್ಯಕ್ಷ ನೇತೃತ್ವ ವಹಿಸಿದ್ದ  ರಾಮ ನವಮಿ ಮೆರವಣಿಗೆಯ ಬಗ್ಗೆ ಏನು ಹೇಳುವಿರಿ ?

ಅದು ಒಂದು ಧಾರ್ಮಿಕ ಮೆರವಣಿಗೆಯಾಗಿದೆ ಮತ್ತು ನಾವು ಅದನ್ನು ರಾಜಕೀಯಗೊಳಿಸಬಾರದೆಂದು  ನಾನು ಭಾವಿಸುತ್ತೇನೆ. ಆದರೆ, ನೀವು ಗಮನಿಸಿರಬಹುದು, ನಾನು ಆ ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ.

ನಾವು ಧರ್ಮದೊಂದಿಗೆ ರಾಜಕೀಯವನ್ನು ಮಿಶ್ರಣ ಮಾಡಬಾರದು ಎಂದು ನಾನು ಭಾವಿಸುತ್ತೇನೆ. ಅದು ನೇತಾಜಿಯ ಸಿದ್ಧಾಂತ. ನನ್ನ ಸಿದ್ಧಾಂತವು ಕೂಡ, ನೇತಾಜಿಯ ಸಿದ್ಧಾಂತ. ನಾನು ಬಿಜೆಪಿಯನ್ನು ನೇತಾಜಿ ಆದರ್ಶಗಳನ್ನು ಹರಡಲು ವೇದಿಕೆಯಾಗಿ ಬಳಸುತ್ತಿದ್ದೇನೆ. ಅವರು ಅದನ್ನು ಒಪ್ಪದಿದ್ದರೆ,  ಬಿಡುತ್ತೇನೆ. ಅಷ್ಟೇ

ಪಶ್ಚಿಮ ಬಂಗಾಳದಲ್ಲಿ ಹಠಾತ್ತನೆ ಧಾರ್ಮಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದೆ. ಈ ಮಕ್ಕಳು ತಮ್ಮ ಕೈಯಲ್ಲಿ  ಶಸ್ತ್ರಾಸ್ತ್ರಗಳನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ. ಬಹುಪಾಲು ಬಂಗಾಳಿಗಳು ಅದು ಆಘಾತಕಾರಿಯೆಂದು  ಭಾವಿಸುತ್ತಾರೆ  ಮತ್ತು ಬಿಜೆಪಿ ಎಂತಹ ಪಕ್ಷವೆಂಬುದನ್ನು ಅದು ಸ್ವಲ್ಪ ಮಟ್ಟಿಗೆ ವ್ಯಾಖ್ಯಾನಿಸಿತು.

ದಿಲೀಪ್ ಘೋಷ್ (ಬಿಜೆಪಿ ಬಂಗಾಳ ಮುಖ್ಯಸ್ಥ)ರಿಗೆ ಅನುಮಾನದ ಒಳಿತನ್ನು  ಕೊಡೋಣ. ಅವರು ಧಾರ್ಮಿಕ ದೃಷ್ಟಿಕೋನದಿಂದ ಇದನ್ನು ಮಾಡಿದರು, ಅವರು ಯಾರ ವಿರುದ್ಧ ಶಸ್ತ್ರಾಸ್ತ್ರಗಳನ್ನು ಬೀಸುತ್ತಿರಲಿಲ್ಲ ಅಥವಾ ಯಾರೊಬ್ಬರ ಮೇಲೆ ದಾಳಿ ಮಾಡುವಂತೆ ಬೆದರಿಕೆ ಹಾಕುತ್ತಿರಲಿಲ್ಲ.

ಆದರೆ ಇದು ಅಪಶ್ರುತಿಯನ್ನು ಮೀಟಿದೆ, ಬಂಗಾಳದಲ್ಲಿ ಯಾವುದೇ ಪಕ್ಷದ ಮುಖಂಡನು ಇಂತಹ ಕೆಲಸವನ್ನು ಮಾಡಿರುವ ಬಗ್ಗೆ   ತಾವು ನೆನಪಿಸಿಕೊಳ್ಳಬಹುದಾ?

ನಾನು ವೈಯಕ್ತಿಕವಾಗಿ ಅದನ್ನು ಒಪ್ಪಿಕೊಳ್ಳುವುದಿಲ್ಲ (ಘಟನೆ). ಹಾಗೆ ನಡೆಯ ಕೂಡದು. ನಾನು ಏನು ಭಾವಿಸುತ್ತೇನೆಂದರೆ, ಧರ್ಮವನ್ನು ಧಾರ್ಮಿಕ ಸಂಘಟನೆ ನಿರ್ವಹಿಸಬೇಕು, ರಾಜಕೀಯ ಪಕ್ಷಗಳಲ್ಲ .  ಧಾರ್ಮಿಕವಾಗಿ ಏನನ್ನಾದರೂ ಮಾಡದಂತೆ ನಮ್ಮನ್ನು  ತಡೆಯಬೇಕು – ಅದು ಮುಸ್ಲಿಮ್ ಸಂಪ್ರದಾಯವಾಗಿರಲಿ , ಹಿಂದೂ ಸಂಪ್ರದಾಯವಾಗಿರಲಿ ಅಥವಾ ಕ್ರಿಶ್ಚಿಯನ್ ಸಂಪ್ರದಾಯವಾಗಿರಲಿ.

? ನೀವು ಧರ್ಮವನ್ನು ರಾಜಕೀಯದಿಂದ ದೂರವಿರಿಸಬೇಕು ಮತ್ತು ರಾಜ್ಯದಲ್ಲಿ ಪಕ್ಷವು ಹೆಚ್ಚು ಒಳಗೊಳ್ಳುವಂತೆ ಮಾಡಲು ಬಯಸುತ್ತೀರಿ ಎಂದು  ಹೇಳುತ್ತೀರಿ. ಆದರೆ, ಬಿಜೆಪಿಯ ಮುಂದಿನ ಮಹಾ ಯೋಜನೆ ರಥ ಯಾತ್ರೆಯಾಗಿದೆ , ಇದು ಪ್ರಸಿದ್ಧ ಕಾಳಿ ದೇವಸ್ಥಾನವಿರುವ  ಹಿಂದೂ ಯಾತ್ರಾ ಸ್ಥಳವಾದ ತರಾಪಿತ್ ನಿಂದ  ಪ್ರಾರಂಭವಾಗುತ್ತದೆ. ಶಾರೊಂದಿಗೆ ಆದಿತ್ಯನಾಥ್ ಹಾಜರಿರುವರು  ಎಂದು ವರದಿಯಾಗಿದೆ.

ಹೆಸರು ಬದಲಾಗಿದೆ ಎಂದು ನಾನು ಭಾವಿಸುತ್ತೇನೆ, ‘ರಥ’ ಹೆಸರನ್ನು ಬಿಡಲಾಗಿದೆ. ಮತ್ತು ಅದನ್ನು ‘ ಪ್ರಜಾಪ್ರಭುತ್ವ ಉಳಿಸಿ ಯಾತ್ರೆ’ ಅಥವಾ ‘ಪ್ರಗತಿ ಯಾತ್ರೆ ‘(ಮೊದಲು ರ್ಯಾಲಿ ಎಂದಿತ್ತು) ಎಂದು ಕರೆಯಬೇಕು ಎಂದು ನಾನು ಅವರಿಗೆ ಪ್ರಸ್ತಾಪವನ್ನು ನೀಡಿದ್ದೇನೆ.   ‘ಅಭಿವೃದ್ಧಿಯ’ ಕುರಿತು ಮೆರವಣಿಗೆ ಮಾಡಬೇಕೆಂದು ಸೂಚಿಸಲಾಗಿದೆ.

? ಒಂದು ಸಂದರ್ಶನವೊಂದರಲ್ಲಿ ನೀವು ಹೇಳಿರುವಿರಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೇಳಿಕೊಂಡಂತೆ ಪಕ್ಷದಲ್ಲಿ ಸಾಕಷ್ಟು ಜನರಿಲ್ಲ ಎಂದು.

ಪಕ್ಷದ  ಹಿನ್ನಲೆಯ  ಜನರಿದ್ದಾರೆ, ಆದರೆ ನನ್ನ ಪ್ರಶ್ನೆ ಅವರು ಆ ನಿಟ್ಟಿನಲ್ಲಿ ಕೆಲಸಮಾಡುತ್ತಾರಾ? ನೀವು ನೈಜ  ಮತದಾರರೊಂದಿಗೆ ಸಂಪರ್ಕ ಸಾಧಿಸಬೇಕು. ಚುನಾವಣೆಗೂ ಮೊದಲು ನಾವೇನು ಮಾಡಿತ್ತೇವೆಂದರೆ ,ಧ್ವಜದೊಂದಿಗೆ ಹೋಗುತ್ತೇವೆ ಮತ್ತು ‘ನಮಗೆ ಮತ ಹಾಕಿ’ ಎಂದು ಹೇಳುತ್ತೇವೆ. ಅನ್ಯಥಾ ಅವರು ನಮಗೆ ಯಾಕೆ ಮತ ನೀಡಬೇಕು.

ನಾನು ಮೊದಲು ಸಂಬಂಧವನ್ನು ಬೆಳೆಸುತ್ತಿದ್ದೇನೆ ಎಂದು ನಾನು ನಂಬುತ್ತೇನೆ. ನರೇಂದ್ರ ಮೋದಿ ಅವರು ‘ಚಾಯ್ ಪೀ ಚರ್ಚಾ’ದೊಂದಿಗೆ ನಾವು ಮಾಡಬೇಕೆಂದು ನಾನು ಸೂಚಿಸಿದೆ. ಬೃಹತ್ ಷಾಮಿಯಾನಾ ಮತ್ತು ವೇದಿಕೆಯನ್ನು ನಿರ್ಮಿಸುವಲ್ಲಿ ಯಾವುದೇ ಪಾಯಿಂಟ್ ಇಲ್ಲ. ನಾವು ವೈಯಕ್ತಿಕವಾಗಿ ಸಂಪರ್ಕಿಸಬೇಕಾಗಿದೆ.

ಏನು ನಡೆಯುತ್ತಿದೆ ಎಂದರೆ , ಅವರು ಬೊಬ್ಬೆ ಹೊಡೆಯುತ್ತಾರೆ ,ಪಕ್ಷದ ಧ್ವಜ ಹಾರಿಸುತ್ತಾರೆ ,ಅಮಿತ್ ಷಾ ರ್ಯಾಲಿಯನ್ನು ಸಹ ಮಾಡಿರುತ್ತಾರೆ.

ತರುವಾಯ ಮರುದಿನ ತೃಣಮೂಲವು ಹೋಗಿ ಅವರನ್ನು ಬಡಿಯುತ್ತದೆ ಅವರು  ಟಿಎಂಸಿಗೆ ಸೇರಿಕೊಳ್ಳುತ್ತಾರೆ. ನಾನು ಹೇಳುತ್ತೇನೆ, ನೀವು  ಟಿಎಂಸಿ ಧ್ವಜ ಹಾರಾಡಿಸಿ  ಆದರೆ ನಮಗೆ ಮತ ನೀಡಿ.

ಇಲ್ಲಿ ಪ್ರದರ್ಶನವನ್ನು ಮಾಡಬೇಡಿ. ಪ್ರದರ್ಶನಗಳು  ಬಂಗಾಳದಲ್ಲಿ ಕೆಲಸ ಮಾಡುವುದಿಲ್ಲ. ಇತರ ರಾಜ್ಯಗಳಲ್ಲಿ, ನೀವು ಡ್ರಮ್ಗಳನ್ನು ಬಾರಿಸಿ  ಧ್ವಜಗಳನ್ನು ಹಾರಿಸಿದರೆ, ಜನರು ನಿಮಗೆ ಮತ ಹಾಕುತ್ತಾರೆ. ಇಲ್ಲಿ ಅದರ ವಿರುದ್ಧ ನಡೆಯುತ್ತದೆ.

? ಬಿಜೆಪಿ ಹಿಂದೂತ್ವ ಅಜೆಂಡಾವನ್ನು ಬಂಗಾಳದಲ್ಲಿ ಪ್ರಚೋದಿಸುವುದಿಲ್ಲವೆಂದು ನೀವು ಹೇಳುತ್ತಿರುವಿರಾ?

ಅದು ಕೆಲಸ ಮಾಡುವುದಿಲ್ಲ. ಇಲ್ಲಿ ಯಾವತ್ತೂ ರಾಜಕೀಯವು ಧರ್ಮವನ್ನು ಆಧರಿಸಿಲ್ಲ. ಅದು ಅಭಿವೃದ್ಧಿ ಮತ್ತು ಮತದಾರರೊಂದಿಗಿನ ಸಂಪರ್ಕವನ್ನು ಆಧರಿಸಿದೆ.