ಕಾಶ್ಮೀರದಲ್ಲಿ ಮತ್ತೆ ಮೊಬೈಲ್ ಫೋನ್ ಸ್ಥಗಿತ; ಲ್ಯಾಂಡ್‌ಲೈನ್‍ಗಾಗಿ ಜನರ ಪರದಾಟ

0
405

ಸನ್ಮಾರ್ಗ ವಾರ್ತೆ

ಶ್ರೀನಗರ, ಆ. 21: ಜಮ್ಮು-ಕಾಶ್ಮೀರದಲ್ಲಿ ಮೊಬೈಲ್ ನೆಟ್‍ವರ್ಕ್ ಪುನಃ ಸ್ಥಗಿತಗೊಳಿಸಲಾಗಿದೆ. ಸೋಮವಾರ ಮೊಬೈಲ್ ನೆಟ್‍ವರ್ಕ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದು ಸರಕಾರ ಹೇಳಿಕೊಂಡಿತ್ತು. ಎರಡು ಗಂಟೆಯ ಬಳಿಕ ಪುನಃ ಸಂಪರ್ಕ ಕಡಿಯಲಾಗಿದೆ. ಇದರೊಂದಿಗೆ ಜನರು ಲ್ಯಾಂಡ್‍ಲೈನ್ ಫೋನ್ ಸರಿಪಡಿಸಲು ಟೆಲಿಫೋನ್ ಎಕ್ಸ್‌ಚೇಂಜ್ ಮುಂದೆ ಸಾಲಾಗಿ ನಿಂತಿದ್ದಾರೆ.

“ಕಳೆದ ಎರಡು ವರ್ಷಗಳಿಂದ ನನ್ನ ಟೆಲಿಫೋನ್ ಕೆಲಸ ಮಾಡುತ್ತಿಲ್ಲ. ಈಗ ಅದು ಸರಿಪಡಿಸದೆ ಬೇರೆ ಉಪಾಯವಿಲ್ಲ. ನಾವು ಹಳೆಯ ಕಾಲಕ್ಕೆ ಮರಳುತ್ತಿದ್ದೇವೆ” ಎಂದು ಶ್ರೀನಗರದ ನಿವಾಸಿಯೊಬ್ಬರು ಹೇಳಿದರು. ಇವರಂತೆ ಹಲವು ಮಂದಿ ಮೊಬೈಲ್ ಸ್ಥಗಿತದಿಂದ ಪರದಾಡುತ್ತಿದ್ದು. ಲ್ಯಾಂಡ್‍ಲೈನ್ ಸರಿಪಡಿಸಲು ಎಕ್ಸ್‌ಚೇಂಜ್ ಮುಂದೆ ಕ್ಯೂ ನಿಂತಿದ್ದಾರೆ. ಕಾಶ್ಮೀರದಲ್ಲಿ ಲ್ಯಾಂಡ್‌ಲೈನ್ ಸರಿಪಡಿಸಿಕೊಳ್ಳಲು ಹಲವಾರು ಮಂದಿ ಸಾಲಾಗಿ ನಿಂತಿದ್ದಾರೆ ಎಂದು ಕಾಶ್ಮೀರದ ಬಿಎಸ್‍ಎನ್‍ಎಲ್ ಕೂಡ ಹೇಳಿದೆ.