ಸನ್ಮಾರ್ಗ ವಾರ್ತೆ
ಕೋಯಮತ್ತೂರ್,ಸೆ.9: ಬಂದೂಕು, ಕತ್ತಿಗಳನ್ನು ಉಪಯೋಗಿಸಿ ಟಿಕ್‍ಟಾಕ್ ವೀಡಿಯೊ ಮಾಡಿದ 21 ವರ್ಷದ ಯುವಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ನಾಮಕ್ಕಲ್ ರಾಸಿಪುರದ ಆರ್.ಚುಡರಮಣಿ ಬಂಧಿತ ಯುವಕ. ಈತನ ನಾಲ್ಕು ಮಂದಿ ಗೆಳೆಯರನ್ನು ಪೊಲೀಸರು ಹುಡುಕುತ್ತಿದ್ದಾರೆ.
ಪದವೀಧರನಾದ ಚುಡರಮಣಿ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ದಿವಸ ರಜೆಯಲ್ಲಿ ಊರಿಗೆ ಬಂದಿದ್ದ. ಧನುಷ್ ನಾಯಕನಾಗಿರುವ ಮಾರಿ-2 ಸಿನೆಮಾದ ದೃಶ್ಯವನ್ನು ಟಿಕ್‍ಟಾಕ್ ವೀಡಿಯೊದಲ್ಲಿ ಚಿತ್ರೀಕರಿಸಿದ್ದು, ಬಳಸಲಾಗಿದ್ದ ಕೋವಿಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.












